Publish Date: Wed, 13 Mar 2019 (15:11 IST)
Updated Date: Wed, 13 Mar 2019 (15:13 IST)
ಆರೋಗ್ಯಕರ ಚುನಾವಣೆ ನಡೆಯಬೇಕು. ಎಲೆಕ್ಷನ್ ಅಂದ್ರೆ ಪ್ರಜಾಪ್ರಭುತ್ವದ ಕಿರೀಟ ಅಂತ ಸುಮಲತಾ ಅಂಬರೀಶ್ ಹೇಳಿದ್ದಾರೆ.
ಜನರಿಗೆ ಹಾಗೂ ವಿರೋಧಿಗಳಿಗೆ ಪರೋಕ್ಷವಾಗಿ ಸುಮಲತಾ ಮನವಿ ಮಾಡಿದ್ದು, ಆರೋಗ್ಯಕರ ಚುನಾವಣೆ ನಡೆಯಬೇಕೆಂದು ತಾವು ಬಯಸಿರುವುದಾಗಿ ಹೇಳಿದ್ದಾರೆ.
ಚುನಾವಣೆ ಅಂದರೆ ಪ್ರಜಾಪ್ರಭುತ್ವದ ಕಿರೀಟ. ಆ ಕಿರೀಟವನ್ನು ಕಾಪಾಡಿಕೊಂಡು ಆರೋಗ್ಯಕರವಾಗಿ ಚುನಾವಣೆ ನಡೆಯಬೇಕು. ಅನಾರೋಗ್ಯಕರವಾಗಿ ಚುನಾವಣೆ ನಡೆಯಬಾರದು ಎಂಬುದು ನನ್ನ ಇಚ್ಛೆ ಮತ್ತು ಮನವಿಯಾಗಿದೆ ಎಂದಿದ್ದಾರೆ.
ತಮ್ಮ ಅಧಿಕೃತ ಫೇಸ್‌ಬುಕ್ ಪೇಜ್‌ನಲ್ಲಿ ಇಮೇಜ್ ಅಪ್‌ಲೋಡ್ ಮಾಡಿರುವ ಸುಮಲತಾ, ಸಾಮಾಜಿಕ ಜಾಲತಾಣದಲ್ಲಿ ಫುಲ್ ಆಕ್ಟೀವ್ ಆದಂತಿದೆ. ನನ್ನ ಜನರಿಗಾಗಿ ನನ್ನ ಹೆಜ್ಜೆ ಎಂಬ ಧ್ಯೇಯವಾಕ್ಯದಡಿ ಸಂದೇಶಗಳ ರವಾನೆ ಮಾಡುತ್ತಿದ್ದಾರೆ.