Select Your Language

Notifications

webdunia
webdunia
webdunia
Thursday, 10 April 2025
webdunia

ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಹುಲ್ ಭೇಟಿ ಮಾಡಿದ್ಯಾಕೆ?

ಚುನಾವಣೆ
ಬೆಂಗಳೂರು , ಬುಧವಾರ, 13 ಮಾರ್ಚ್ 2019 (14:39 IST)
ಲೋಕಸಭೆ ಚುನಾವಣೆ ರಂಗೇರುತ್ತಿರುವಂತೆ ಹೈಕಮಾಂಡ್ ಅಲರ್ಟ್ ಆಗಿದೆ. ಇತ್ತ ಮೈತ್ರಿ ಪಕ್ಷದ ಮುಖಂಡರೂ ಸಹ ಹೈಕಮಾಂಡ್ ಭೇಟಿ ಮಾಡುತ್ತಿರುವುದು ಚರ್ಚೆಗೆ ಕಾರಣವಾಗಿದೆ.  

ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ಲೋಕಸಭೆ ಸೀಟು ಹೊಂದಾಣಿಕೆ‌ ವಿಚಾರ ಕುರಿತು ಜೆಡಿಎಸ್ ಮಹತ್ವದ ಚರ್ಚೆ ನಡೆಸುತ್ತಿದೆ.

ದೆಹಲಿಯಲ್ಲಿ ಕಾಂಗ್ರೆಸ್, ಜೆಡಿಎಸ್ ನಾಯಕರ ಭೇಟಿ ಕುತೂಹಲ ಮೂಡಿಸಿದೆ.

ರಾಹುಲ್ ಭೇಟಿ ಮಾಡಿದ ಡ್ಯಾನಿಷ್ ಆಲಿ ಚುನಾವಣೆ ಕುರಿತು ಸುದೀರ್ಘ ಚರ್ಚೆ ನಡೆಸಿದರು. ದೆಹಲಿಯ ತುಘಲಕ್ ಲೇನ್ ನಲ್ಲಿರುವ ರಾಹುಲ್ ನಿವಾಸಕ್ಕೆ ಭೇಟಿ ನೀಡಿದ ಡ್ಯಾನಿಷ್ ಅಲಿ, ಸೀಟು ಹಂಚಿಕೆ ಸಂಬಂಧ ಫೈನಲ್ ಮಾತುಕತೆ ನಡೆಸಿದರು. ಈಗಾಗಲೇ ಜೆಡಿಎಸ್ ಗೆ  7 ಸೀಟು ಬಿಟ್ಟುಕೊಟ್ಟಿರುವ ಕಾಂಗ್ರೆಸ್ ನಡೆ ರಾಜಕೀಯದಲ್ಲಿ ಗಮನ ಸೆಳೆಯುತತಿದೆ. ಅದಕ್ಕೆ ಜೆಡಿಎಸ್ ನಾಯಕರಿಂದಲೂ ಸಮ್ಮತಿ ಸಿಕ್ಕಿದೆ.



 

Share this Story:

Follow Webdunia kannada

ಮುಂದಿನ ಸುದ್ದಿ

ತತ್ಕಾಲ್ ಟಿಕೆಟ್ ಬುಕಿಂಗ್... ಸಂಪೂರ್ಣ ವಿವರಣೆಗಳು