Publish Date: Tue, 03 Dec 2019 (15:45 IST)
Updated Date: Tue, 03 Dec 2019 (15:51 IST)
ಹೆಣ್ಣಿನ ಮೇಲೆ ನಡೆಯುತ್ತಿರುವ ಅತ್ಯಾಚಾರ ಘಟನೆಗಳ ವಿರುದ್ಧ ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಹೊಸ ಹೇಳಿಕೆ ನೀಡಿದ್ದಾರೆ.
ತೆಲಂಗಾಣದ ಪಶುವೈದ್ಯೆ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ, ಹತ್ಯೆ ಘಟನೆ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾಳೆ.
ವಿಡಿಯೋವನ್ನು ಇಸ್ಟ್ರಾಗ್ರಾಂ ನಲ್ಲಿ ಹಂಚಿಕೊಂಡಿರೋ ಡ್ರಾಮಾ ಕ್ವಿನ್, ಯುವತಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ. ಈ ಆರೋಪಿಗಳು ನಂಬಿಕೆಗೆ ಅರ್ಹರಲ್ಲ ಎಂದು ದೇಶದ ಮಹಿಳೆಯರಿಗೆ ಹೇಳಲು ಇಷ್ಟಪಡುತ್ತೇನೆ.
ಇವರು ಮಾನವೀಯತೆಯನ್ನು ನೋಡುವುದಿಲ್ಲ. ಆರೋಪಿಗಳಿಗೆ ಗಲ್ಲಿಗೆ ಏರಿಸಬೇಕೆಂದು ನಾನು ಈ ದೇಶದ ಕಾನೂನಿಗೆ ಹೇಳಲು ಬಯಸುತ್ತೇನೆ. ಗಲ್ಲಿಗೇರಿಸಲು ಆಗಲಿಲ್ಲ ಎಂದರೆ ಅವರ ಪುರುಷತ್ವದ ಅಂಗವನ್ನು ಕಟ್ ಮಾಡಬೇಕೆಂದು ಒತ್ತಾಯ ಮಾಡಿದ್ದಾಳೆ.