Publish Date: Sat, 09 Mar 2019 (17:22 IST)
Updated Date: Sat, 09 Mar 2019 (17:24 IST)
ರೈಲೊಂದು ಹಳಿ ತಪ್ಪಿದ ಪರಿಣಾಮ ಪ್ರಯಾಣಿಕರು ಪರದಾಡಿದ ಘಟನೆ ನಡೆದಿದೆ.
ಕಲಬುರ್ಗಿ ಯಲ್ಲಿ ಗೂಡ್ಸ್ ರೈಲು ಹಳಿ ತಪ್ಪಿದೆ. ಸೇಡಂ ಪಟ್ಟಣದ ರೈಲು ನಿಲ್ದಾಣದಲ್ಲಿ ಘಟನೆ ನಡೆದಿದೆ. ವಾಸವದತ್ತ ಸಿಮೆಂಟ್ ಕಾರ್ಖಾನೆಯಿಂದ ಸಿಮೆಂಟ್ ತುಂಬಿಕೊಂಡು ಹೋಗುತ್ತಿದ್ದ ವೇಳೆ ಘಟನೆ ನಡೆದಿದೆ.
ಗೂಡ್ಸ್ ರೈಲು ಹಳಿ ತಪ್ಪಿದ್ದರಿಂದ ರೈಲು ಸಂಚಾರದಲ್ಲಿ ಅಸ್ತವ್ಯಸ್ತ ಉಂಟಾಗಿದೆ. ಹೈದರಾಬಾದ್ ವಾಡಿ ನಡುವೆ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಆಗಿದೆ.
ಮುಂಬಯಿ, ಕೊಲ್ಲಾಪುರ ಮತ್ತು ವಿಜಯಪುರಗಳಿಗೆ ತೆರಳುತ್ತಿದ್ದ ರೈಲುಗಳ ಸಂಚಾರದಲ್ಲಿ ವಿಳಂಬ ಉಂಟಾಗಿದೆ. ಗೂಡ್ಸ್ ಹಳಿ ತಪ್ಪಿದ್ದರಿಂದ ಪ್ರಯಾಣಿಕರ ಪರದಾಟ ಹೆಚ್ಚಿತ್ತು. ಕೆಲ ದಿನಗಳ ಹಿಂದೆ ಮಳಖೇಡ ಬಳಿ ಸಿಮೆಂಟ್ ತುಂಬಿಕೊಂಡು ಬರುತ್ತಿದ್ದ ಗೂಡ್ಸ್ ಹಳಿ ತಪ್ಪಿದ್ದರಿಂದ ಇದೇ ಸ್ಥಿತಿ ನಿರ್ಮಾಣ ಆಗಿತ್ತು.