Select Your Language

Notifications

webdunia
webdunia
webdunia
webdunia

ರಾಷ್ಟ್ರರಾಜಧಾನಿಗೆ ನೂತನ ರೈಲು ಸೌಲಭ್ಯ

ರಾಷ್ಟ್ರರಾಜಧಾನಿಗೆ ನೂತನ ರೈಲು ಸೌಲಭ್ಯ
ಚಿಕ್ಕಬಳ್ಳಾಪುರ , ಮಂಗಳವಾರ, 5 ಮಾರ್ಚ್ 2019 (19:15 IST)
ರಾಜ್ಯದ ರಾಜಧಾನಿಯಿಂದ ರಾಷ್ಟ್ರದ ರಾಜಧಾನಿಯವರೆಗೆ ನೂತನ ರೈಲು ಸಂಚಾರ ಸೌಲಭ್ಯ ಕಲ್ಪಿಸಿರುವುದು ಪ್ರಯಾಣಿಕರ ಸಂತಸಕ್ಕೆ ಕಾರಣವಾಗಿದೆ.

ನವದೆಹಲಿಗೆ ನೂತನ ರೈಲು ಸೌಲಭ್ಯ ಕಲ್ಪಿಸಲಾಗಿದೆ. ಯಶವಂತಪುರ ದಿಂದ ಚಿಕ್ಕಬಳ್ಳಾಪುರ ಕೋಲಾರ ಮಾರ್ಗದಲ್ಲಿ ನವದೆಹಲಿಗೆ ರೈಲು ಸಂಚರಿಸಲಿದೆ. ವಾರದಲ್ಲಿ ಎರೆಡು ದಿನ ಸಂಚರಿಸಲಿರುವ ರೈಲು ಇಂದು ಚಿಕ್ಕಬಳ್ಳಾಪುರಗೆ ಆಗಮಿಸಿದ ಮೊದಲ ಎಕ್ಸ್‌ಪ್ರೆಸ್‌ ರೈಲನ್ನು ಕಂಡು ರೈಲು ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದರು. ಸಾವಿರಾರು ನಾಗರಿಕರು ರೈಲಿಗೆ ಸ್ವಾಗತ ಕೋರಿದರು.

ಮೊದಲ ಪ್ರಯಾಣಕ್ಕೆ ಹಸಿರು ನಿಶಾನೆ ತೋರಿದ ಸಂಸದ ವೀರಪ್ಪ ಮೊಯ್ಲಿ ಹಾಗೂ ಶಾಸಕ ಡಾ.ಕೆ.ಸುಧಾಕರ್ ಶುಭ ಕೋರಿದರು. ಮೊದಲದಿನದ ಸಂಚಾರವನ್ನು ಕಂಡು ಸಂತಸ ವ್ಯಕ್ತಪಡಿಸಿದರು ನಾಗರಿಕರು.




Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ಬರುವ ಮುನ್ನವೇ ಬಿಜೆಪಿಯಲ್ಲಿ ಭುಗಿಲೆದ್ದ ಬಂಡಾಯ