Select Your Language

Notifications

webdunia
webdunia
webdunia
webdunia

ಈ ಮೂಲಕ ಯೋಧರಿಗೆ ಗೌರವ ಸಲ್ಲಿಸಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಸೂರತ್‌ ಸೀರೆ ತಯಾರಿಕಾ ಸಂಸ್ಥೆ

ಈ ಮೂಲಕ ಯೋಧರಿಗೆ  ಗೌರವ ಸಲ್ಲಿಸಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಸೂರತ್‌ ಸೀರೆ ತಯಾರಿಕಾ ಸಂಸ್ಥೆ
ನವದೆಹಲಿ , ಸೋಮವಾರ, 4 ಮಾರ್ಚ್ 2019 (10:22 IST)
ನವದೆಹಲಿ : ಸೂರತ್‌ ಮೂಲದ ಸಂಸ್ಥೆಯೊಂದು ಸೈನಿಕರಿರುವ ಸೀರೆಯನ್ನು ತಯಾರಿಸುವುದರ ಮೂಲಕ ಎಡವಟ್ಟೊಂದನ್ನು ಮಾಡಿ ಇದೀಗ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಫೆಬ್ರವರಿ 14 ರಂದು ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ 44 ಮಂದಿ ಸಿ.ಆರ್‌.ಪಿ.ಎಫ್‌. ಯೋಧರು ಹುತಾತ್ಮರಾಗಿದ್ದರು. ಈ ಹಿನ್ನಲೆಯಲ್ಲಿ ಯೋಧರಿಗೆ  ಗೌರವ ಸಲ್ಲಿಸುವ ನಿಟ್ಟಿನಲ್ಲಿ ಸೂರತ್‌ ಮೂಲದ ಸಂಸ್ಥೆಯೊಂದು ಸೈನಿಕರಿರುವ ಸೀರೆಯನ್ನು ಸಿದ್ಧಪಡಿಸಿದೆ. ಆರಂಭದಲ್ಲಿ ಸಂಸ್ಥೆಯ ಕ್ರಿಯಾಶೀಲತೆಯನ್ನು ಅನೇಕರು ಮೆಚ್ಚಿದ್ದರೂ ಬಳಿಕ ಟೀಕಿಸಲು ಆರಂಭಿಸಿದ್ದಾರೆ.

 

ಇದಕ್ಕೆ ಕಾರಣವೆನೆಂದರೆ ಈ ಸೀರೆಗಳಲ್ಲಿ ಭಾರತೀಯ ಯೋಧರ ಫೋಟೋಗಳನ್ನು ಹಾಕುವ ಬದಲು ಅಮೆರಿಕಾ ಸೇನೆಯ ಫೋಟೋವನ್ನು ಹಾಕಿದ್ದಾರೆ. ಇದು ನೆಟ್ಟಿಗರ ಕೋಪಕ್ಕೆ ಕಾರಣವಾಗಿದ್ದು, ಕಂಪನಿಯ ವಿರುದ್ಧ ಭಾರತೀಯರು ತಿರುಗಿಬಿದ್ದಿದ್ದಾರೆ.  ಬಳಿಕ ಇನ್ನೊಂದು ಸೀರೆ ತಯಾರಿಕಾ ಸಂಸ್ಥೆ ತಾವು ಸಿದ್ಧಪಡಿಸಿದ ಮೂರರಿಂದ ನಾಲ್ಕು ಸೀರೆಯ ಡಿಸೈನ್‌ ನನ್ನು ಬಿಡುಗಡೆಗೊಳಿಸಿದ್ದು, ಇದರಲ್ಲಿ ಭಾರತೀಯ ಯೋಧರ ಫೋಟೋಗಳನ್ನು ಮಾತ್ರ ಬಳಸಿಕೊಳ್ಳುವ ಎಚ್ಚರಿಕೆಯನ್ನು ವಹಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಜೈಶೆ ಉಗ್ರ ಮಸೂದ್ ಅಜರ್ ಸತ್ತಿಲ್ಲ ಎಂದ ಪಾಕ್ ಮಾಧ್ಯಮ