Select Your Language

Notifications

webdunia
webdunia
webdunia
webdunia

ಪ್ರಿಯತಮನ ಜೊತೆ ಮದುವೆಯಾಗಲು ಮನೆಬಿಟ್ಟು ಹೋದ ಯುವತಿಗೆ ಆಗಿದ್ದೇನು ಗೊತ್ತಾ?

ಪ್ರಿಯತಮನ ಜೊತೆ ಮದುವೆಯಾಗಲು ಮನೆಬಿಟ್ಟು ಹೋದ ಯುವತಿಗೆ ಆಗಿದ್ದೇನು ಗೊತ್ತಾ?
ನವದೆಹಲಿ , ಗುರುವಾರ, 14 ಫೆಬ್ರವರಿ 2019 (10:12 IST)
ನವದೆಹಲಿ : ಪ್ರಿಯತಮನೊಂದಿಗೆ ಮದುವೆಯಾಗಲು ಮನೆಬಿಟ್ಟು ಹೋದ 15 ವರ್ಷದ ಬಾಲಕಿ ದಾರಿ ತಪ್ಪಿ ಕಾಮುಕರ ಕೈಗೆ ಸಿಕ್ಕಿ ಅತ್ಯಾಚಾರಕ್ಕೊಳಗಾದ ಘಟನೆ ದೆಹಲಿಯಲ್ಲಿ ನಡೆದಿದೆ.


ಲುಧಿಯಾನದ ನಿವಾಸಿಯಾದ ಸಂತ್ರಸ್ತ ಬಾಲಕಿಗೆ  ಒಂದು ವರ್ಷದ ಹಿಂದೆ ಸಂಬಂಧಿಕರನ್ನು ಭೇಟಿಯಾಗಲು ಬಂದಿದ್ದ ಸಾಹಿಲ್ ಎಂಬಾತನೊಂದಿಗೆ ಸ್ನೇಹವಾಗಿತ್ತು. ನಂತರ ಈ ಸ್ನೇಹ ಪ್ರೀತಿಗೆ ತಿರುಗಿ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು. ಅದಕ್ಕಾಗಿ ಆತ ಆಕೆಗೆ ದೆಹಲಿಗೆ ಬರಲು ಹೇಳಿದ್ದಾನೆ. ಆದಕಾರಣ ಬಾಲಕಿ ಫೆ.3 ರಂದು ಮನೆ ಬಿಟ್ಟು ರೈಲು ಹತ್ತಿದ್ದಾಳೆ. 


ಆದರೆ ಆಕೆ ದೆಹಲಿ ರೈಲು ಹತ್ತುವ ಬದಲು ಅಮೃತಸರ ರೈಲು ಹತ್ತಿದ್ದಾಳೆ. ನಂತರ ಆಕೆ ದೆಹಲಿ ರೈಲಿನ ಬಗ್ಗೆ ಆಟೋ ಚಾಲಕನೊಬ್ಬನ  ಬಳಿ ಕೇಳಿದಾಗ ಆತ ರೈಲು ಬೆಳಿಗ್ಗೆ ಬರುತ್ತದೆ ಎಂದು ಸುಳ್ಳು ಹೇಳಿ ರಾತ್ರಿ ಹೋಟೆಲೊಂದಕ್ಕೆ ಆಕೆಯನ್ನು ಕರೆದೊಯ್ದು ಸ್ನೇಹಿತರ ಜೊತೆ ಸೇರಿ ಅತ್ಯಾಚಾರವೆಸಗಿದ್ದಾನೆ.


ಅವರಿಂದ ಹೇಗೋ ತಪ್ಪಿಸಿಕೊಂಡು ಲೂಧಿಯಾನ ತಲುಪಿದ ಯುವತಿ ಅಲ್ಲಿ ಪೊಲಿಸರಿಗೆ ಆರೋಪಿಗಳ ವಿರುದ್ಧ ದೂರು ನೀಡಿದ್ದಾಳೆ. ಈ ದೂರಿನ ಮೇರೆಗೆ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಗೋವಾ ಬೀಚ್ ನಲ್ಲಿ ಸ್ನಾನ ಮಾಡುತ್ತಿದ್ದ ಮಹಿಳೆಗೆ ಪೊಲೀಸ್ ಪಡೆ ಸಿಬ್ಬಂದಿ ಮಾಡಿದ್ದೇನು ಗೊತ್ತಾ?