Select Your Language

Notifications

webdunia
webdunia
webdunia
webdunia

ಗೋವಾ ಬೀಚ್ ನಲ್ಲಿ ಸ್ನಾನ ಮಾಡುತ್ತಿದ್ದ ಮಹಿಳೆಗೆ ಪೊಲೀಸ್ ಪಡೆ ಸಿಬ್ಬಂದಿ ಮಾಡಿದ್ದೇನು ಗೊತ್ತಾ?

ಪಣಜಿ
ಪಣಜಿ , ಗುರುವಾರ, 14 ಫೆಬ್ರವರಿ 2019 (10:04 IST)
ಪಣಜಿ : ಗೋವಾದ ಕ್ಯಾಲಂಗುಟ್ ಬೀಚ್ ನಲ್ಲಿ ಸ್ನಾನ ಮಾಡುತ್ತಿದ್ದ ಮಹಿಳೆ ಮೇಲೆ ಕೇಂದ್ರ ಮೀಸಲು ಪೊಲೀಸ್ ಪಡೆ ಸಿಬ್ಬಂದಿಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ನಡೆದಿದೆ.


ರಾಜಸ್ಥಾನ ಮೂಲದ ರಾಜವೀರ್ ಪ್ರಭು ದಯಾಳ್ ಸಿಂಗ್ ಈ ನೀಚ ಕೃತ್ಯ ಎಸಗಿದ ಆರೋಪಿ. ಮಹಿಳೆಯಬ್ಬಳು ತನ್ನ ಪತಿ ಹಾಗೂ ಮಕ್ಕಳ ಜೊತೆ ಸಮುದ್ರದ ಅಂಚಿನಲ್ಲಿ ಸ್ನಾನ ಮಾಡುತ್ತಿದ್ದಾಗ ರಾಜವೀರ್, ಮಹಿಳೆಯೊಂದಿಗೆ ಅಶ್ಲೀಲವಾಗಿ ಮಾತನಾಡಿದ್ದಲ್ಲದೆ, ಅನುಚಿತವಾಗಿ ಸ್ಪರ್ಶಿಸಿದ್ದಾನೆ. ಇದಕ್ಕೆ ಆಕೆಯ ಪತಿ ವಿರೋಧ ವ್ಯಕ್ತಪಡಿಸಿದ್ದಕ್ಕೆ ಆತನ ಮೇಲೆ ಹಲ್ಲೆ ನಡೆಸಿದ್ದಾನೆ.


ಈ ಘಟನೆಗೆ ಸಂಬಂಧಸಿದಂತೆ  ಮಹಿಳೆ ಕ್ಯಾಲಂಗುಟ್ ಪೊಲೀಸರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪತಿಯ ಸ್ನೇಹಿತನ ಬಲೆಗೆ ಬಿದ್ದ ಮಹಿಳೆಗೆ ಕೊನೆಗೆ ಆಗಿದ್ದೇನು?