Select Your Language

Notifications

webdunia
webdunia
webdunia
webdunia

ಅಪರೇಷನ್ ಕಮಲಕ್ಕೆ ಒಳಗಾಗದೆ ಮರಳಿ ಗೂಡಿಗೆ ಸೇರಿದ ಕಾಂಗ್ರೆಸ್ ನಾಯಕರು ಹೇಳಿದ್ದೇನು ಗೊತ್ತಾ?

ಅಪರೇಷನ್ ಕಮಲಕ್ಕೆ ಒಳಗಾಗದೆ ಮರಳಿ ಗೂಡಿಗೆ ಸೇರಿದ ಕಾಂಗ್ರೆಸ್ ನಾಯಕರು ಹೇಳಿದ್ದೇನು ಗೊತ್ತಾ?
ಬೆಂಗಳೂರು , ಶುಕ್ರವಾರ, 18 ಜನವರಿ 2019 (07:13 IST)
ಬೆಂಗಳೂರು : ಕಾಂಗ್ರೆಸ್ ನವರ ಸಂಪರ್ಕಕ್ಕೆ ಸಿಗದೇ  ಅಪರೇಷನ್ ಕಮಲಕ್ಕೆ ಒಳಗಾಗಿದ್ದಾರೆ ಎನ್ನಲಾದ ಕಾಂಗ್ರೆಸ್ ಶಾಸಕರು ಇದೀಗ ತಮ್ಮ ಮನೆಗೆ ವಾಪಾಸ್ಸಾಗಿದ್ದು, ಈ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ.


ಶಾಸಕ ಭೀಮಾನಾಯ್ಕ್ ಸುದ್ದಿಗಾರೊಂದಿಗೆ ಮಾತನಾಡಿ, ‘ನಾನು ಎಲ್ಲೂ ಹೋಗಿಲ್ಲ, ಈಗ ಬೆಂಗಳೂರಿನಲ್ಲೇ ಇದ್ದೇನೆ. ಇದೆಲ್ಲಾ ಸುಳ್ಳು, ಬರಿ ಊಹಾಪೋಹವಷ್ಟೇ. ನಾನು ಮಂಗಳವಾರ ಗೋವಾದಿಂದ ಬಂದಿದ್ದೀನೆ. ನಾನು ಯಾವುದೇ ಕಾರಣಕ್ಕೂ ಪಕ್ಷ ಬಿಡುವ ಯೋಚನೆ, ಪ್ರಯತ್ನ ಮಾಡಿಲ್ಲ ಎಂದಿದ್ದರು. ಅಲ್ಲದೇ ನಾನು ಫೋನ್ ಮೂಲಕ ಕಾಂಗ್ರೆಸ್ ನಾಯಕರ ಜೊತೆ ಮಾತನಾಡುತ್ತಿದ್ದೆ. ನಾನು ಗೋವಾಗೆ ಹೋಗಿದ್ದು, ಧಾರವಾಡದಲ್ಲಿ ಇರುವುದನ್ನು ಕೂಡ ಸಿದ್ದರಾಮಯ್ಯ ಅವರಿಗೆ ಮೊದಲೇ ಹೇಳಿದ್ದೆ ಎಂದು ತಿಳಿಸಿದ್ದಾರೆ. 


ಹಾಗೇ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಅವರು ಹೊಸಪೇಟೆಯಲ್ಲಿ ದಿಢೀರ್ ಪ್ರತ್ಯಕ್ಷವಾಗಿ, ನಾನು ಮುಂಬೈಗೂ ಹೋಗಿಲ್ಲ. ಬೆಂಗಳೂರಿಗೂ ಹೋಗಿಲ್ಲ. ನನ್ನ ಇಬ್ಬರು ಮಕ್ಕಳು ಚಿಕ್ಕಮಗಳೂರಿನಲ್ಲಿ ಓದುತ್ತಿದ್ದಾರೆ. ಹೀಗಾಗಿ ಮಕ್ಕಳನ್ನು ನೋಡಲು ಹೋಗಿದ್ದೆ. ಎರಡು ದಿನ ನಾನು ಅಲ್ಲಿಯೇ ತಂಗಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ.


ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರ ಅವರು ಮಾತನಾಡಿ, ಎಲ್ಲರೂ ಅಲ್ಲಲ್ಲಿ ಇದ್ವಿ ಅಷ್ಟೇ. ಕೆಲವರು ಏನೇನೋ ಹೇಳುತ್ತಾರೆ. ಅದನ್ನೆಲ್ಲಾ ನಾವು ನೀವು ನಂಬುವುದಕ್ಕೆ ಆಗುತ್ತಾ? ನಮ್ಮಿಂದ ಸರ್ಕಾರಕ್ಕೆ ಸಂಕಷ್ಟ ಇಲ್ಲ. ನಾವು ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರಾಗಿ ಇದ್ದೇವೆ ಎಂದು ಹೇಳಿದ್ದಾರೆ.


ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್,’ ಮನೆಯಲ್ಲಿ ಅಪ್ಪ ಮಕ್ಕಳು ಸಿಟ್ಟಾಗುವುದು ಸಹಜ. ಹಾಗೆಂದ ಮಾತ್ರಕ್ಕೆ ಮನೆ ಬಿಟ್ಟು ಹೋಗಲು ಸಾಧ್ಯವೇ? ಮನೆಯಲ್ಲಿ ಅಪ್ಪ ಮಕ್ಕಳು ಜಗಳವಾಡುತ್ತಾರೆ. ಮನೆಯಲ್ಲಿ ಏನು ಆಗಬೇಕು ಎನ್ನುವುದನ್ನು ಕೇಳುವುದು ನಮ್ಮ ಹಕ್ಕು. ಅದನ್ನು ನಾವು ಕೇಳುತ್ತೇವೆ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಹೆಬ್ಬಾವನ್ನು ಕಳ್ಳಸಾಗಣೆ ಮಾಡುತ್ತಿದ್ದ ವ್ಯಕ್ತಿಯೊಬ್ಬ ಅದನ್ನು ಇರಿಸಿಕೊಂಡಿದ್ದೆಲ್ಲಿ ಗೊತ್ತಾ?