ಹೆಬ್ಬಾವನ್ನು ಕಳ್ಳಸಾಗಣೆ ಮಾಡುತ್ತಿದ್ದ ವ್ಯಕ್ತಿಯೊಬ್ಬ ಅದನ್ನು ಇರಿಸಿಕೊಂಡಿದ್ದೆಲ್ಲಿ ಗೊತ್ತಾ?

ಶುಕ್ರವಾರ, 18 ಜನವರಿ 2019 (06:32 IST)
ಜರ್ಮನಿ : ಪ್ಯಾಂಟ್ ಒಳಗೇ ಹೆಬ್ಬಾವನ್ನು ಇರಿಸಿಕೊಂಡು ಕಳ್ಳಸಾಗಣೆ ಮಾಡುತ್ತಿದ್ದ ವ್ಯಕ್ತಿಯೊಬ್ಬ ಸಿಕ್ಕಿಹಾಕಿಕೊಂಡ ಘಟನೆ ಜರ್ಮನಿಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.


ಜರ್ಮನಿಯಿಂದ ಇಸ್ರೇಲ್‍ ಗೆ ಹೊರಟಿದ್ದ 43 ವರ್ಷದ ವ್ಯಕ್ತಿಯೊಬ್ಬ ಹೆಬ್ಬಾವನ್ನು ಕಳ್ಳಸಾಗಣೆ ಮಾಡಲು  ಸೊಂಟಕ್ಕೊಂದು ಬ್ಯಾಗ್ ಸಿಕ್ಕಿಸಿಕೊಂಡು ಅದರಲ್ಲಿ ಹೆಬ್ಬಾವನ್ನು ಇರಿಸಿ ಅದನ್ನು ಪ್ಯಾಂಟ್ ಒಳಗೆ ಇಳಿಬಿಟ್ಟುಕೊಂಡು ವಿಮಾನ ನಿಲ್ದಾಣದಲ್ಲಿ ಸಾಗುತ್ತಿದ್ದ. ಆ ವೇಳೆ ಅಧಿಕಾರಿಗಳಿಗೆ ಆತನ ಮೇಲೆ ಅನುಮಾನ ಬಂದು ಪರಿಶೀಲಿಸಿದಾಗ  ಆತನ ಪ್ಯಾಂಟ್ ಒಳಗೆ ಹೆಬ್ಬಾವು ಇರುವುದು ಪತ್ತೆಯಾಗಿದೆ.


ಹೆಬ್ಬಾವಿನ ರಫ್ತು-ಆಮದಿಗೆ ಜರ್ಮನಿಯಲ್ಲಿ ನಿರ್ಬಂಧ ಇರುವುದರಿಂದ ಹಾಗೂ ಅದನ್ನು ಸಾಗಿಸಲು ಅನುಮತಿ ಇಲ್ಲದ ಕಾರಣ ಅಧಿಕಾರಿಗಳು ಹಾವನ್ನು ವಶಪಡಿಸಿಕೊಂಡು, ಆತನಿಗೆ ದಂಡ ವಿಧಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕುಡಿದ ಮತ್ತಿನಲ್ಲಿ ಗರ್ಭಿಣಿ ಮೇಕೆಯ ಮೇಲೆ ಅತ್ಯಾಚಾರ ಮಾಡಿದ ಕಾಮುಕ ಅರೆಸ್ಟ್