Publish Date: Mon, 01 Oct 2018 (12:43 IST)
Updated Date: Mon, 01 Oct 2018 (12:46 IST)
ಬೆಂಗಳೂರು : ಆಟೋ ಚಾಲಕನೊಬ್ಬ ಮಹಿಳೆಯರ ಮುಂದೆಯೇ ಪ್ಯಾಂಟ್ ಬಿಚ್ಚುತ್ತೇನೆ ಎಂದು ಅಸಭ್ಯವಾಗಿ ವರ್ತಿಸಿರುವ ಘಟನೆ ಗರುಡಾ ಮಾಲ್ ಬಳಿ ನಡೆದಿದೆ .
ಭಾನುವಾರ ಸಂಜೆ 5 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದ್ದು, ಮೊದಲಿಗೆ ಮಹಿಳೆಯನ್ನು ಗುರಾಯಿಸಿಕೊಂಡು ನಿಂತಿದ್ದ ಚಾಲಕನನ್ನು ಕಡೆ ನೋಡಿ ಯಾಕೆ ನನ್ನನ್ನೇ ನೋಡುತ್ತಿದ್ದೀರಿ? ನಿಮ್ಮ ಕೆಲಸ ಮಾಡಿ ಎಂದು ಮಹಿಳೆ ಬುದ್ಧಿವಾದ ಹೇಳಿದ್ದಳು. ಆದರೆ, ಆಟೋ ಚಾಲಕ ನನ್ನಿಷ್ಟ ನಾನು ಗುರಿಯಾಸ್ತಿನಿ, ಪ್ಯಾಂಟ್ನಾದ್ರು ಬಿಚ್ಚುತೇನೆ ಎಂದು ಅಸಭ್ಯವಾಗಿ ಮಾತನಾಡಿದ್ದಾನೆ. ಇದರಿಂದ ಸಿಟ್ಟಿಗೆದ್ದ ಮಹಿಳೆ ವಿಡಿಯೋ ಮಾಡಲು ಮುಂದಾದಾಗ ಚಾಲಕ ತನ್ನ ದುರ್ವರ್ತನೆಯನ್ನ ನಿಲ್ಲಿಸಿದ್ದಾನೆ.
ಈ ವಿಡಿಯೋವನ್ನು ಮಹಿಳೆ ಬೆಂಗಳೂರು ಸಿಟಿ ಪೊಲೀಸ್ ಫೇಸ್ ಬುಕ್ ಪೇಜ್ನಲ್ಲಿ ಟ್ಯಾಗ್ ಮಾಡಿ ಬೆಂಗಳೂರು ಪೊಲೀಸರೇ ಬೇಗ ಎಚ್ಚೆತ್ತುಕೊಳ್ಳಿ ಇದಕ್ಕೆ ಸರಿಯಾದ ಕ್ರಮ ತೆಗೆದುಕೊಳ್ಳಿ ಎಂದು ಮಹಿಳೆ ವಿನಂತಿಸಿಕೊಂಡಿದ್ದಾಳೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.