ಹಾಸನ : ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ರೀತಿ ತೊಂದರೆ ಇಲ್ಲ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದ್ದಾರೆ.
									
			
			 
 			
 
 			
					
			        							
								
																	
ನಿನ್ನೆ ಅಪರೇಷನ್ ಕಮಲದ ಬಗ್ಗೆ ಮಾತಾಡಲು ನಿರಾಕರಿಸಿ ಪಂಚಾಗ ನೋಡಿ ಹೇಳುತ್ತೇನೆ ಎಂದ ಸಚಿವ ಹೆಚ್.ಡಿ.ರೇವಣ್ಣ  ಅವರು ಇಂದು ಸುದ್ಧಿಗಾರರೊಂದಿಗೆ ಮಾತನಾಡಿ, ‘ಲೋಕಸಭಾ ಚುನಾವಣೆ ವೇಳೆ ರಾಜ್ಯಕ್ಕೆ ಒಳ್ಳೆಯದನ್ನು ಮಾಡದೆ ಇದ್ದರೆ ಜನ ನಿಮ್ಮನ್ನು ತಿರಸ್ಕರಿಸುತ್ತಾರೆ’ ಎಂದು ಹೇಳಿದ್ದಾರೆ.
									
										
								
																	
‘ಯಡಿಯೂರಪ್ಪ ರಾಜ್ಯಕ್ಕೆ ಅನುದಾನ ತರುವ ಬಗ್ಗೆ ಚಿಂತಿಸಲಿ. ರಾಜ್ಯದ 156 ತಾಲೂಕುಗಳಲ್ಲಿ ಬರಗಾಲ ತಾಂಡವವಾಡುತ್ತಿದೆ. ಅನುದಾನ ನೀಡಲು 4 ಬಾರಿ ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಆದರೆ ಬಿಎಸ್ ವೈ ಶಾಸಕರನ್ನ ನೋಡಿಕೊಳ್ಳುವುದ್ರಲ್ಲೇ ಬ್ಯುಸಿ’ ಎಂದು ಯಡಿಯೂರಪ್ಪ ವಿರುದ್ಧ ಹೆಚ್.ಡಿ.ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.
									
											
							                     
							
							
			        							
								
																	
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ 
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.