Select Your Language

Notifications

webdunia
webdunia
webdunia
webdunia

ಏ.16ಕ್ಕೆ ಕೋಲಾರಕ್ಕೆ ರಾಹುಲ್ ಗಾಂಧಿ ಎಂಟ್ರಿ- ಜೈ ಭಾರತ್ ಸಮಾವೇಶ : ಡಿಕೆಶಿ

Rahul Gandhi entry to Kolar on A.16 - Jai Bharat Conference
bangalore , ಭಾನುವಾರ, 9 ಏಪ್ರಿಲ್ 2023 (13:54 IST)
ಕೋಲಾರದಲ್ಲಿ ಜೈಭಾರತ್ ಸಮಾವೇಶದ ದಿನಾಂಕ ಕೊನೆಗೂ ನಿಗದಿಯಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಸಮಾವೇಶದಲ್ಲಿ ಭಾಗಿಯಾಗಲಿದ್ದು, ಇದೇ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಕಾಂಗ್ರೆಸ್ ನೂತನ ಕಚೇರಿ ಇಂದಿರಾ ಭವನವನ್ನು ಉದ್ಘಾಟನೆ ಮಾಡಲಿದ್ದಾರೆ.ಕೋಲಾರದಲ್ಲಿ ರಾಹುಲ್ ಗಾಂಧಿ ಸಮಾವೇಶ ಏಪ್ರಿಲ್ 10 ಕ್ಕೆ ನಿಗದಿಯಾಗಿತ್ತು, ಅದಕ್ಕೂ ಮೊದಲು 9 ರಂದು ನಡೆಸಲು ತೀರ್ಮಾನ ಮಾಡಲಾಗಿತ್ತು. ಆದರೆ ಇವರೆಡು ದಿನಾಂಕಗಳು ಬದಲಾವಣೆ ಆಗಿದ್ದು, ಏಪ್ರಿಲ್ 16 ರಂದು ಸಮಾವೇಶ ದಿನಾಂಕ ನಿಗದಿಯಾಗಿದೆ.ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಒತ್ತಡಕ್ಕೆ ಮಣಿದು ರಾಹುಲ್ ಗಾಂಧಿಯನ್ನು ಸಂಸದ ಸ್ಥಾನದಿಂದ ಅನರ್ಹ ಮಾಡಿದ್ದು ಪ್ರಜಾಪ್ರಭುತ್ವಕ್ಕೆ ಅವಮಾನವಾಗಿದೆ. ರಾಜಕೀಯ ನಿಂತ ನೀರಲ್ಲ ಎಂದರು.ರಾಹುಲ್ ಸಮಾವೇಶದ ನಿಟ್ಟಿನಲ್ಲಿ ಸಿದ್ಧತೆ ನಡೆಯುತ್ತಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ನಿಷೇಧಿತ ಪಿಎಫ್ಐನ ಇಬ್ಬರು ಮುಖಂಡರ ಬಂಧನ