Select Your Language

Notifications

webdunia
webdunia
webdunia
webdunia

ಡಿಕೆಶಿಗೆ ವಿರುದ್ಧ ತೊಡೆ ತಟ್ಟಲು ಸಿದ್ದರಾದ್ರು ಅಪ್ಪಾಜಿಗೌಡ

ಡಿಕೆಶಿಗೆ ವಿರುದ್ಧ ತೊಡೆ ತಟ್ಟಲು ಸಿದ್ದರಾದ್ರು ಅಪ್ಪಾಜಿಗೌಡ
bangalore , ಮಂಗಳವಾರ, 4 ಏಪ್ರಿಲ್ 2023 (20:00 IST)
ಬಿಜೆಪಿ ಕಚೇರಿಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆದಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಚಿವ ಶ್ರೀರಾಮುಲು, ಸಂಸದ ದೇವೇಂದ್ರಪ್ಪ ನೇತೃತ್ವದಲ್ಲಿ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಡಾ ಅಪ್ಪಾಜಿಗೌಡ ಬಿಜೆಪಿ ಸೇರ್ಪಡೆಯಾಗಿದ್ದಾರೆ..ಕನಕಪುರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಡಾ. ಅಪ್ಪಾಜಿಗೌಡ ರವರನ್ನು ರಾಜ್ಯ ನಾಯಕರು ಬಿಜೆಪಿ ಧ್ವಜ ನೀಡಿ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ಪಕ್ಷ ಸೇರ್ಪಡೆ ಬಳಿಕ ಡಾ.ಅಪ್ಪಾಜಿ ಗೌಡ ಡಿಕೆ ಶಿವಕುಮಾರ್ ವಿರುದ್ಧ ಸ್ಪರ್ಧೆ ಬಗ್ಗೆ ಮಾತನಾಡಿದ್ದಾರೆ. ಕಾಲ ಬದಲಾದಾಗ ಎಲ್ಲವೂ ಬದಲಾಗುತ್ತೆ, ಇಡೀ ಭಾರತ ಕಾಂಗ್ರೆಸ್ ಅನ್ನೋ ಕಾಲ ಇತ್ತು, ಆದ್ರೆ ಈಗ ಕಾಂಗ್ರೆಸ್ ಪರಿಸ್ಥಿತಿ ಏನಾಗಿದೆ ಅಂತ ಎಲ್ಲರಿಗೂ ಗೊತ್ತು ಎಂದು ತಿಳಿಸಿದ್ದಾರೆ.ಕನಕಪುರದ ಜನರ ಮುಂದೆ ಬಿಜೆಪಿ ಕಾರ್ಯ ಸಾಧನೆಗಳನ್ನು ಮುಂದಿಡ್ತೆನೆ ಎಂದಿದ್ದಾರೆ. ಕನಕಪುರದಲ್ಲೂ ಬದಲಾವಣೆ ಆಗುತ್ತೆ. ಜನ ಸೂಕ್ತ ತೀರ್ಮಾನ ತಗೋತಾರೆ, ಯಾವುದೇ ಕಾರ್ಯ ಮಾಡಿದ್ರೂ ಅದನ್ನು ಪ್ರಯತ್ನ ಅಂತಾರೆ, ಎಲ್ಲ ಸಮಯದಲ್ಲೂ ಒಂದೇ ಥರ ಇರಲ್ಲ ಪ್ರತೀ ದಿನ ಸಂಡೇ ಬರಲ್ಲ, ದೇಶದಲ್ಲಿ ಬದಲಾವಣೆ ಆಗಿದೆ, ಕನಕಪುರದಲ್ಲೂ ಬದಲಾವಣೆ ಆಗಲಿದೆ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಏ .8 ರಂದು ಬಿಜೆಪಿ ಮೊದಲ ಪಟ್ಟಿ ಬಿಡುಗಡೆ : ಸಿಎಂ ಬೊಮ್ಮಾಯಿ