Select Your Language

Notifications

webdunia
webdunia
webdunia
webdunia

ದೊಣ್ಣೆಯಿಂದ ಹೊಡೆದು ಯುವಕನ ಬರ್ಬರ ಕೊಲೆ

Barbaric murder of a young man by beating him with a stick
bangalore , ಮಂಗಳವಾರ, 4 ಏಪ್ರಿಲ್ 2023 (18:05 IST)
ರೈಲ್ವೇ ಟ್ರ್ಯಾಕ್ ಹತ್ತಿರದ ಖಾಲಿ ಜಾಗ.ಕಸದ ರಾಶಿ ಮಧ್ಯೆ ಯುವಕನ ಶವವೊಂದು ಬಿದ್ದಿತ್ತು.ಅದನ್ನ ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ಕೊಟ್ಟಿದ್ರು.ಬಂದು ನೋಡಿದ ಖಾಕಿ ತಂಡಕ್ಕೆ ಇದೊಂದು ಕೊಲೆ ಅನ್ನೋದು ಗೊತ್ತಾಗಿದೆ.ರಾತ್ರಿ ಕೊಲೆ ಮಾಡಿರೊ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.ಕೊಲೆಗೆ ಕಾರಣ ಮಾತ್ರ ನಿಗೂಢವಾಗೇ ಇದೆ.ರೈಲ್ವೇ ಟ್ರ್ಯಾಕ್..ಪಕ್ಕದಲ್ಲೇ ಕಸದ ರಾಶಿ..ಪೊಲೀಸರ ಟೀಂ ಸ್ಥಳದಲ್ಲಿ ಬೀಡುಬಿಟ್ಟಿದೆ..ಎಫ್ಎಸ್ಎಲ್ ತಂಡ ಇಂಚಿಂಚು ಪರಿಶೀಲನೆ ನಡೆಸ್ತಿದ್ರೆ..ಓಡಾಡ್ತಿದ್ದ ಜನ ಆತಂಕದಿಂದಲೇ ನೋಡ್ತಿದ್ದಾರೆ.‌

ಕೆಜಿ ಹಳ್ಳಿಯ ಪಿಳ್ಳಣ್ಣ ಗಾರ್ಡನ್ ಏರಿಯಾ..ರೈಲ್ವೇ ಟ್ರಾಕ್ ದಾಟಿದ್ರೆ ಬಾಣಸವಾಡಿ..ಇದೇ ಜಾಗದಲ್ಲಿ ಎಂದಿನಂತೆ ಜನ ಬೆಳಗ್ಗೆ ಓಡಾಡ್ತಿದ್ರು..ಆದರೆ ಅಲ್ಲಿನ ಸ್ಥಿತಿ ಮಾತ್ರ ಎಂದಿನಂತೆ ಇರಲಿಲ್ಲ..ಕಸ ಕಡ್ಡಿ ಬಿದ್ದಿದ್ದ ಜಾಗದಲ್ಲಿ ಮೃತದೇಹವೊಂದು ಬಿದ್ದಿತ್ತು..ಇದನ್ನ ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ..ಘಟನಾ ಸ್ಥಳಕ್ಕೆ ಬಂದ ಕೆ.ಜಿ.ಹಳ್ಳಿ ಪೊಲೀಸರು ಪರಿಶೀಲನೆ ನಡೆಸಿದ್ರು..ಹೀಗೆ ಹೆಣವಾಗಿಬಿದ್ದಿದ್ದು 23 ವರ್ಷದ ಸತೀಶ್ ಎನ್ನಲಾಗ್ತಿದೆ.

 ಚಿತ್ರಣ ನೋಡಿದ ಖಾಕಿ ಪಡೆಗೆ ಇದೊಂದು ಕೊಲೆ ಅನ್ನೋದು ಗೊತ್ತಾಗಿದೆ..ಯಾಕಂದ್ರೆ ತಲೆಗೆ ಬಲವಾದ ಪೆಟ್ಟುಬಿದ್ದು ರಕ್ತಸಿಕ್ತವಾಗಿತ್ತು..ಪಕ್ಕದಲ್ಲೇ ನೆತ್ತರು ಅಂಟಿದ ದೊಣ್ಣೆಗಳು ಬಿದ್ದಿದ್ವು..ಹಾಗಾಗಿ ದೊಣ್ಣೆಯಿಂದ ಹಲ್ಲೆ ನಡೆಸಿರುವ ಕಿಡಿಗೇಡಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ ಅನ್ನೋ ಶಂಕೆ ಇದೆ..ಅಲ್ಲದೇ ಎಫ್ಎಸ್ಎಲ್ ತಂಡ ಕೂಡ ಬಂದು ಸಾಕ್ಷ್ಯ ಕಲೆ ಹಾಕಿದೆ..ಘಟನೆಯಿಂದ ಸುತ್ತಮುತ್ತಲ ಜನ ಆತಂಕಗೊಂಡಿದ್ದಾರೆ.ಘಟನೆ ಸಂಬಂಧ ಕೆಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.ಅಷ್ಟೇ ಅಲ್ಲದೇ ಕೊಲೆಗೆ ಕಾರಣ ಏನು ಅನ್ನೋದು ಕೂಡ ನಿಗೂಢವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೈರ್ ಬಸ್ಟ್ ಆಗಿ ಸ್ಕೂಟರ್ ಅಪಘಾತ..ಯುವತಿ ಸಾವು