Select Your Language

Notifications

webdunia
webdunia
webdunia
webdunia

ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರಚಾರ ನಿಷೇಧಿಸಿದ ಬಿಬಿಎಂಪಿ

ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರಚಾರ ನಿಷೇಧಿಸಿದ ಬಿಬಿಎಂಪಿ
bangalore , ಮಂಗಳವಾರ, 4 ಏಪ್ರಿಲ್ 2023 (15:40 IST)
ಕರ್ನಾಟಕ ಅಸೆಂಬ್ಲಿ ಚುನಾವಣೆ ಹಿನ್ನೆಲೆ ಮದುವೆ ಸಮಾರಂಭ ಮಾಡುವ ಮೊದಲು ಬಿಬಿಎಂಪಿಯ ಈ ನಿಯಮ ಪಾಲಿಸೋದು ಒಳ್ಳೆಯದು.ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರಚಾರವನ್ನ ಬಿಬಿಎಂಪಿ ನಿಷೇಧಿಸಿದೆ.ರಾಜಕೀಯ ಪ್ರಚಾರಕ್ಕಾಗಿ ಮದುವೆ ಮತ್ತಿತರ  ಕಾರ್ಯಕ್ರಮಗಳನ್ನು ದುರ್ಬಳಕೆ ಮಾಡಿಕೊಳ್ಳದಂತೆ ಕಟ್ಟೆಚ್ಚರ ವಹಿಸಲಿದೆ.ಮದುವೆ ಸಮಾರಂಭಗಳಿಗೆ ಮಾದರಿ ನೀತಿ ಸಂಹಿತೆ ಅನ್ವಯ ಆಗಲ್ಲ.ಮದುವೆ ಸಮಾರಂಭ ಕಾರ್ಯಕ್ರಮದ ನೆಪದಲ್ಲಿ ಪ್ರಚಾರಕ್ಕೆ ಮುಂದಾದ್ರೆ ಕ್ರಮ ಕೈಗೊಳ್ಳುತ್ತೇವೆ .ಆದರೆ ಪಕ್ಷಗಳು ಈ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಗಳಿವೆ.ರಾಜಕಾರಣಿಗಳು ಅಥವಾ ಪಕ್ಷಗಳು ಭಾಗಿಯಾಗಿರುವ ಬಗ್ಗೆ ಮಾಹಿತಿ ಪಡೆದಾಗ ಬಿಬಿಎಂಪಿ ಆ ಸ್ಥಳಗಳಿಗೆ ಭೇಟಿ ನೀಡುತ್ತೆ.ಒಂದು ವೇಳೆ ದುರ್ಬಳಕೆ ಕಂಡುಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಹಿತಿ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಿಫ್ಟ್ ನಲ್ಲಿ ಸಿಲುಕಿದ ವ್ಯಕ್ತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ