Select Your Language

Notifications

webdunia
webdunia
webdunia
webdunia

ಟ್ರಾಫಿಕ್ ದಟ್ಟಣೆ ತಗ್ಗಿಸಲು ಬಿಬಿಎಂಪಿ ಹೊಸ ಪ್ಲಾನ್

ಟ್ರಾಫಿಕ್ ದಟ್ಟಣೆ ತಗ್ಗಿಸಲು ಬಿಬಿಎಂಪಿ ಹೊಸ ಪ್ಲಾನ್
bangalore , ಶನಿವಾರ, 25 ಮಾರ್ಚ್ 2023 (16:00 IST)
ಉದ್ಯಾನನಗರಿ ಇನಷ್ಟು ಬಲಿಷ್ಠವಾಗ್ಬೇಕು‌‌‌...ಜನ್ರು ಆರಾಮಾಗಿ ಬೆಂಗಳೂರಿನಲ್ಲಿ ಜೀವ್ನ ಕಳಿಬೇಕು ಅಂತಾ ಪಾಲಿಕೆ ಹೊಸ ಹೊಸ ಕಾಮಗಾರಿ, ಯೋಜನೆಗಳನ್ನ ಪ್ರತಿಭಾರಿ ತನ್ನ ಬಜೆಟ್ನಲ್ಲಿ ಹೊಸ ಪ್ಲಾನ್ ಹಾಕಿಕೊಳ್ಳುತ್ತೆ ಅದೇ ರೀತಿ ಈ ಬಾರಿ ಕೂಡ ತನ್ನ ಬಜೆಟ್ ಪ್ಲಾನ್ ನಲ್ಲಿ ನಗರದ 9 ರಸ್ತೆ ,ಪ್ಲೈಓವರ್ ಮೇಲ್ದರ್ಜೆಗೆ ಕೊಂಡ್ಯೋಬೇಕು ಅಂತಾ ರೆಡಿಯಾಗಿದೆ‌‌‌‌.ಪಾಲಿಕೆಯ ಹೊಸ ಪ್ಲಾನ್  ಪ್ರಕಾರ ಹಳೆಯ ಐದು ಜಂಕ್ಷನ್ ಹಾಗೂ ಹೊಸ ನಾಲ್ಕು ಫ್ಲೈ ಓವರ್ ಗಳ ನಿರ್ಮಾಣ ಮಾಡೋಕೆ ಮುಂದಾಗಿದೆ‌‌‌..ಈ ಎಲ್ಲಾ  ಹೊಸ ಯೋಜನೆಗಳಿಗಾಗಿ ಅನುಷ್ಠಾನಕ್ಕೆ ಸದ್ಯ ಸಾಲ ಮಾಡೋಕೆ ಬಿಬಿಎಂಪಿ ಮುಂದಾಗಿದೆ‌‌..ಕೆ.ಎ.ಐ.ಡಿ.ಎಫ್.ಸಿ. ಯಿಂದ ಸಾಲ ಪಡೆದು ಕಾಮಗಾರಿ ಆರಂಭಕ್ಕೆ ಕ್ಷಣಗಣನೆ ಫಿಕ್ಸ್ ಮಾಡ್ಕೊಂಡಿದೆ‌‌..ಸದ್ಯ ಒಪ್ಪಿಗೆ ಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿಲಾಗಿದೆ‌‌

ಪಾಲಿಕೆ ಪ್ಲಾನ್ ನಲ್ಲಿ ಒಳಗೊಂಡ ರಸ್ತೆಗಳು ಹಾಗೂ ಫ್ಲೈ ಓವರ್ ಗಳು ಯಾವುವು ಅಂತಾ ನೋಡೊದಾದ್ರೆ.‌‌ 
 
GFX
 
ಫ್ಲೈ ಓವರ್ ರಸ್ತೆ ಹಾಗೂ ವೆಚ್ಚಗಳ ವಿವರ... 
 
1) ತುಮಕೂರು ರಸ್ತೆಯಿಂದ ನಾಯಂಡಹಳ್ಳಿ ಜಂಕ್ಷನ್ ವರೆಗೆ
ಸಿಗ್ನಲ್‌ ಮುಕ್ತ ಕಾರಿಡಾರ್‌ಗಾಗಿ 70 ಕೋಟಿ ರೂ. 
 
2)  ಮಹಾಲಕ್ಷ್ಮೀಲೇಔಟ್, ಆರ್.ಆರ್.ನಗರ ಕುರುಬರಹಳ್ಳಿ, ಹಾಗೂ ಮಾಗಡಿ ರಸ್ತೆಯವರೆಗಿನ ತಡೆರಹಿತ ಕಾರಿಡಾರ್‌ಗಾಗಿ 190 ಕೋಟಿ ರೂ. 
 
3)ಯಶವಂತಪುರ ರೈಲ್ವೆ ನಿಲ್ದಾಣ ಬಳಿ ಕೆಳ ಸೇತುವೆಗಾಗಿ 125 ಕೋಟಿ ರೂ 
 
4) ಬನ್ನೇರುಘಟ್ಟ ರಸ್ತೆಯ ಅಗಲೀಕರಣಕ್ಕೆ 70 ಕೋಟಿ ರೂ. 5. ವಿಲ್ಸನ್ ಗಾರ್ಡನ್ ಮೇಲೇತುವೆಯ ಗ್ರೇಡ್ ಸೆಪರೇಟರ್‌ಗೆ 85 ಕೋಟಿ ರೂ. 
 
6) ಯಲಹಂಕ ಮೇಲ್ಸೇತುವೆ ಕೋಟಿ ರೂ. ಗ್ರೇಡ್ ಸೆಪರೇಟರ್‌ಗೆ 60 
 
7) ಹೂಡಿ ಜಂಕ್ಷನ್, ಐ.ಟಿ.ಪಿ.ಎಲ್ ಬಿಗ್-ಬಜಾರ್ ಜಂಕ್ಷನ್ ಹಾಗೂ ಹೋಪ್ ಫಾರಂಜಂಕ್ಷನ್‌ಗಳಲ್ಲಿನ
ಮೇಲೇತುವೆಗೆ 124 ಕೋಟಿ ರೂ. 
 
8) ಮಿನರ್ವ, ಜಂಕ್ಷನ್ ಗ್ರೇಡ್ ಸೆಪೆರೇಟರ್‌ಗೆ 137 ಕೋಟಿ ರೂ. 
 
9) ಹಳೆ-ಮದ್ರಾಸ್ ರಸ್ತೆಯ ಸುರಂಜನ್ ದಾಸ್ ಜಂಕ್ಷನ್‌ನಲ್ಲಿಯ ಮೇಲ್ಸೇತುವೆಗೆ 104 ಕೋಟಿ ರೂ..

ಇನ್ನೂ ಹೆಚ್ಚುವರಿ ಹಣದಲ್ಲಿ 770 ಕೋಟಿ ರೂ. ಗಳನ್ನು ಕೆ.ಎ.ಐ.ಡಿ.ಎಫ್.ಸಿ. ಯಿಂದ ಸಾಲ ಪಡೆದು ಉಳಿದ ಹಣವನ್ನು ಪಾಲಿಕೆ ಬೊಕ್ಕಸದಿಂದ ಪಡೆಯಲು ಯೋಜನೆ ನಿರೂಪಿಸಿಕೊಂಡಿದೆ‌.ಸಾರ್ವಜನಿಕರ ಸುಖಕರ ಸಂಚಾರದ ಅನುಕೂಲಕ್ಕಾಗಿ ಈ ಯೋಜನೆ ರೂಪಿಸಲಾಗಿದೆ.9 ಯೋಜನೆಗಳಿಗೆ 2023/24 ರ ಬಜೆಟ್ ನಲ್ಲಿ 965 ಕೋಟಿಗಳ ಹೆಚ್ಚುವರಿ ಹಣ ಒದಗಿಸಲಾಗಿದ್ದು
ಬಜೆಟ್ ನಲ್ಲಿ 770 ಕೋಟಿ ಕೆ.ಎ.ಐ.ಡಿ.ಎಫ್.ಸಿ ಸಾಲದ ರೂಪದಲ್ಲಿ ಉಳಿಕೆ ಹಣವನ್ನು ಬಿಬಿಎಂಪಿ ..ಒದಗಿಸಲಿದೆ
ಏಪ್ರಿಲ್ ಮೊದಲ ವಾರದಿಂದ ಯೋಜನೆಗಳಿಗೆ ಚಾಲನೆ ನೀಡಲಾಗುತ್ತೆ..ಸಾಲದ ಹಣ ವಾಪಸ್ ನೀಡಲು ಸರ್ಕಾರದಿಂದ ಅನುದಾನ ಪಡೆಯುವ ನೀರಿಕ್ಷೆ ಇದೆ..ಕಾಮಗಾರಿ ವೇಳೆ ಪರಿಸರದಲ್ಲಿರುವ ಮರಗಿಡಿಗಳನ್ನು ಸ್ಥಳಾಂತರ ಮಾಡುವ ಅವಕಾಶ ಇದ್ರೆ ಅದು ಮಾಡಲಾಗುತ್ತೆ....ಜೊತೆಗೆ ಈ ಬಾರಿ ಸಹ ಹೊಸ ಸಸಿಗಳನ್ನು ನೆಟ್ಟು ಪರಿಸರ ರಕ್ಷಣೆ ಮಾಡಲಾಗುತ್ತೆ ಅಂತಾ ಪಾಲಿಕೆ ಸ್ಪೆಷಲ್ ಕಮಿಷನರ್ ರವೀಂದ್ರ ಮಾಹಿತಿ ನೀಡಿದ್ದಾರೆ. 

ಪಾಲಿಕೆ‌ ತನ್ನ ವರ್ಷದ ಬಜೆಟ್‌ ನಲ್ಲಿ ಹೊಸ ಪ್ಲಾನ್ ನನ್ನ ಸರ್ಕಾರದ ಮುಂದಿಟ್ಟಿದೆ ..ಸರ್ಕಾರ ಅಸ್ತು ಅಂತಾ ಹೇಳಿದ್ರೆ ಕಾಮಗಾರಿ ಆರಂಭವಾದ್ರೆ ನಗರದ 9 ಭಾಗಗಳಲ್ಲಿ ಸಂಚಾರ ಸುಗಮವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೆಟ್ರೋ ನಿಲ್ದಾಣಕ್ಕೆ ಬಸವಣ್ಣನ ಹೆಸರು