Select Your Language

Notifications

webdunia
webdunia
webdunia
webdunia

ಬೆಂಗಳೂರಿನ ೨೮ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಬಿಬಿಎಂಪಿ‌ ಸಿದ್ದತೆ..!

ಬೆಂಗಳೂರಿನ ೨೮ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಬಿಬಿಎಂಪಿ‌ ಸಿದ್ದತೆ..!
bangalore , ಬುಧವಾರ, 29 ಮಾರ್ಚ್ 2023 (19:51 IST)
ಕರ್ನಾಟಕ ವಿಧಾನಸಭಾ ಚುನಾವಣಗೆ ಮುಹೂರ್ತ ಫಿಕ್ಸ್ ಆಗಿದ್ದು ಇಂದಿನಿಂದಲೇ‌ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಗೆ ಬಂದಿದೆ..  ಮೇ ೧೦ ಕ್ಕ ಮತದಾನ ಮೇ ೧೩ ಕ್ಕೆ ಮತ ಏಣಿಕೆಗೆ ದಿನಾಂಕ ನಿಗದಿಯಾಗಿದೆ.‌ ಕೇಂದ್ರ ಚುನಾವಣಾ ಆಯೋಗ ರಾಜ್ಯದಲ್ಲಿ ಚುನಾವಣೆ ಘೋಷಣೆ ಮಾಡ್ತಿದ್ದಂತೆ ಬಿಬಿಎಂಪಿ‌ ಕಮಿಷನರ್ ಕೂಡ ಸುದ್ದಿ ಗೋಷ್ಠಿ ಮಾಡಿ ಬಿಬಿಎಂಪಿ‌ ವ್ಯಾಪ್ತಿಯಲ್ಲಿ ಯಾವ ರೀತಿ ಸಿದ್ದತೆ ಆಗಿದೆ ಅನ್ನೋದನ್ನ ವಿವರಿಸಿದ್ದಾರೆ.ಕೇಂದ್ರ ಚುನಾವಣಾ ಆಯೋಗ ರಾಜ್ಯದಲ್ಲಿ ಚುನಾವಣಾ ದಿನಾಂಕ‌ ಷೋಷಣೆ ಮಾಡ್ತಿದ್ದಂತೆ ಬೆಂಗಳೂರು ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರಿಂದ ಇಂದು ಮಾಧ್ಯಮಗೋಷ್ಠಿಯನ್ನು ನಡೆಸಿದ್ರು..

ಈಗಾಗಲೇ ಚುನಾವಣೆಗೆ ಬೇಕಾದ ತಂಡದ ರಚನೆ ಆಗಿದೆ,ಶಿಕ್ಷಣ  ಇಲಾಖೆ, ಸಾರಿಗೆ ಇಲಾಖೆ, ಕಂದಾಯ ಇಲಾಖೆ ಹಾಗೂ ಬಿಬಿಎಂಪಿ ಅಧಿಕಾರಿಗಳು ಮುಖ್ಯವಾಗಿ ಇಲ್ಲಿ ಕೆಲಸ ಮಾಡಲಿದ್ದಾರೆ 28ರ ಪೈಕಿ 19 ವಿಧಾನಸಭಾ ಕ್ಷೇತ್ರಗಳನ್ನು ಈಗಾಗಲೇ ಎಕ್ಸ್ ಪೆಂಡಿಚರ್ ಕ್ಷೇತ್ರ ಎಂದು ಘೋಷಣೆ ಮಾಡಿದ್ದೇವೆ ಎಂದು ತಿಳಿಸಿದ್ರು. ಬೆಂಗಳೂರಿನಲ್ಲಿ ಒಟ್ಟು ಮತದಾರರ ಸಂಖ್ಯೆ 95,13,830 ಇದ್ದು ಇದರಲ್ಲಿ  ಪುರುಷ ಮತದಾರರ ಸಂಖ್ಯೆ 49,26,270, ಮತ್ತು  ಮಹಿಳಾ ಮತದಾರರು 45,85,824 ನಷ್ಟಿದೆ... ಹೊಸ  ಮತದಾರರ ಸಂಖ್ಯೆ 1,08,494 ಇದೆ ಎಂಬ ಮಾಹಿತಿ ತಿಳಿಸಿದ್ರು.. 28 ವಿಧಾನಸಭಾ ಕ್ಷೇತ್ರಗಳಿಗೂ ರಿರ್ಟನಿಂಗ್ ಆಫೀಸರ್ ಗಳ ನೇಮಕವಾಗಿದ್ದು  ಒಟ್ಟು ಮತಗಟ್ಟೆಗಳ ಸಂಖ್ಯೆ 8615 ಗಳನ್ನ ಪಟ್ಟಿಮಾಡಲಾಗಿದೆ.. ಚುನಾವಣಾ ಅಕ್ರಮ ತಡೆಯಲು ಸಹ ಸಾಕಷ್ಟು ಕ್ರೀಯಾಯೋಜನೆಗಳನ್ನ ಅಧಿಕಾರಿಗಳು ಮಾಡಿಕೊಂಡಿದ್ದಾರೆ.

8615 ಪೈಕಿ 2217 ಮತಗಟ್ಟೆಗಳ ಸೂಕ್ಷ್ಮ ಮತಗಟ್ಟೆಗಳು ಎಂದು ಘೋಷಣೆ ಮಾಡಿದ್ದು, ಕಳೆದ ಚುನಾವಣೆಯಲ್ಲಿ ಕೆಲವು ಸಮಸ್ಯೆಗಳು ಆದ ಆಧಾರದ ಮೇರೆಗೆ ಸೂಕ್ಷ್ಮ ಮತಗಟ್ಟೆ ಎಂದು ಗುರುತು ಮಾಡಲಾಗಿದೆ.. ಸೂಕ್ಷ್ಮ ಮತಗಟ್ಟೆಗಳಲ್ಲಿ Central Para Military Force ನಿಯೋಜನೆ ಮಾಡುತ್ತೇವೆ ಎಂದು ತುಷಾರ್ ಗಿರಿನಾಥ್‌ ತಿಳಿಸಿದ್ರು.. ಚುನಾವಣೆ ಸಂಬಂಧ 36 ಒಟ್ಟು ಚೆಕ್ ಪೋಸ್ಟ್  ಮಾಡಲಾಗಿದ್ದು, ಕರ್ನಾಟಕ ತಮಿಳುನಾಡು ಬಾರ್ಡರ್ ನಲ್ಲಿ 8 ಚೆಕ್ ಪೋಸ್ಟ್ ನಿಯೋಜನೆ ಮಾಡಲಾಗಿದೆ. ಜೊತೆಗೆ ಜಿಲ್ಲೆ ‌ಬಾರ್ಡರ್ ಗಳಲ್ಲಿ 11 ಚೆಕ್ ಪೋಸ್ಟ್  ಮಾಡಲಾಗಿದೆ.ಬೆಂಗಳೂರಿನಲ್ಲಿ ಚುನಾವಣೆ ಕರ್ತವ್ಯ ನಿರ್ವಹಣೆ ಮಾಡಲು ೭೮ ಸಾವಿರ ಸಿಬ್ಬಂದಿಗಳ ಅಗತ್ಯವಿದ್ದು  ಈಗಾಗಲೇ ೪೮ ಸಾವಿರ ಸಿಬ್ಬಂದಿಗಳನ್ನ ನಿಯೋಜನೆ ಮಾಡಿಕೊಳ್ಳಲಾಗಿದೆ.. ಈ ಬಾರಿ ಹೊಸ ಇವಿಎಂ ಮೀಷನ್ ಗಳನ್ನ ಬಳಕೆ ಮಾಡಲಾಗ್ತಿತ್ತು ಎಲ್ಲ ಮತಗಟ್ಟೆಗಳು ಹೊಸ ಇವಿಎಂ ಮಿಷನ್ ನೀಡಲಾಗುವುದು ಎಂದು ಆಯುಕ್ತರು ಚುನಾವಣಾ ಸಿದ್ದತೆ ಬಗ್ಗೆ ವಿವರಣೆ ನೀಡಿದ್ದಾರೆ.ರಾಜ್ಯ ರಾಜಧಾನಿಯಲ್ಲಿ ಚುನಾವಣೆ ಯಶಸ್ವಿಯಾಗಿ ಮಾಡಲು ಅಧಿಕಾರಿಗಳು ಕಸರತ್ತು ಶುರು ಮಾಡಿದ್ದಾರೆ.‌ ಮೇ ೧೩ ರ ವರಗೆ ಏನೇಲ್ಲಾ ಬೆಳವಣಿಗೆ ಆಗುತ್ತೆ ಯಾವ ರೀತಿ ಚುನಾವಣೆ ನಡೆಯುತ್ತೆ ಅನ್ನೋದನ್ನ ರಾಜ್ಯದ ಜನ ಎದರು ನೋಡ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚುನಾವಣಾ ನೀತಿ ಸಂಹಿತೆ ಜಾರಿಯಾದಲ್ಲಿ ಯಾವುದೇ ವೇದಿಕೆ ಕಾರ್ಯಕ್ರಮಕ್ಕೆ ಅವಕಾಶವಿಲ್ಲ..!