Select Your Language

Notifications

webdunia
webdunia
webdunia
webdunia

ಪಂಚಮಸಾಲಿ ಶ್ರೀಗಳಿಗೆ ಕಾಂಗ್ರೆಸ್ ನಾಯಕರು ಕುಡಿದು ಕಿರುಕುಳ ನೀಡಿದ್ದಾರೆ : ಸಿಸಿ ಪಾಟೀಲ್ ಆರೋಪ

ಪಂಚಮಸಾಲಿ ಶ್ರೀಗಳಿಗೆ ಕಾಂಗ್ರೆಸ್ ನಾಯಕರು ಕುಡಿದು ಕಿರುಕುಳ ನೀಡಿದ್ದಾರೆ : ಸಿಸಿ ಪಾಟೀಲ್ ಆರೋಪ
bangalore , ಮಂಗಳವಾರ, 4 ಏಪ್ರಿಲ್ 2023 (16:32 IST)
ಕುಡಿದು ಪಂಚಮಸಾಲಿ ಶ್ರೀ ಗಳಿಗೆ ಕರೆ ಮಾಡಿ ಕಾಂಗ್ರೆಸ್ ನಾಯಕರು ಕಿರುಕುಳ ನೀಡುತ್ತಿದ್ದಾರೆ ಎಂದು ಸಚಿವ ಸಿ.ಸಿ. ಪಾಟೀಲ್ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ.ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಯಿಂದ ಸಿಎಂ ಬೊಮ್ಮಾಯಿ ಪಂಚಮಸಾಲಿ ಸಮುದಾಯಕ್ಕೆ 2ಡಿ ಮೀಸಲಾತಿ ಕೊಟ್ಟಿದ್ದಕ್ಕೆ ಸಿಎಂ ಹಾಗೂ ಕೆಂದ್ರಕ್ಕೆ ಅಭಿನಂದನೆ ಸಲ್ಲಿಸ್ತೀವಿ. ಮೃತ್ಯುಂಜಯ ಸ್ವಾಮೀಜಿ 750 ಕಿ.ಮೀ ಪಾದಯಾತ್ರೆ ಮಾಡಿದ್ರು. ಹರಿಹರದಿಂದ ವಚನಾನಂದ ಸ್ವಾಮಿಗಳು ಬೆಂಬಲ ವ್ಯಕ್ತಪಡಿಸಿದರು. ಯಾವುದೇ ರಾಜಕಾರಣಕ್ಕೆ ಮೀಸಲಿರಿಸದೇ ಪಂಚಮಸಾಲಿ ಸಮುದಾಯಕ್ಕೆ ನ್ಯಾಯ ಕೊಡಿಸೋದಕ್ಕೆ ಹೋರಾಟ ಮಾಡಿದರು. ಈ ಹೋರಾಟವನ್ನ ಮಾಡಿ ಜಯಮೃತ್ಯುಂಜಯ ಸ್ವಾಮೀಜಿಗಳನ್ನ ಅಭಿನಂದಿಸುತ್ತೇನೆ.ಇನ್ನು 
ಕಾಶಪ್ಪನವರು ಹಾಗೂ ವಿನಯ್ ಕುಲಕರ್ಣಿ ಸೇರಿದಂತೆ ಹಲವಾರು ಸರ್ಕಾರದ ಗೆಜೆಟ್ ಸುಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಇದನ್ನ ನಾವು ತೀವ್ರವಾಗಿ ವಿರೋಧ ಮಾಡ್ತೀವಿ. ಕಾಂಗ್ರೆಸ್ ನ ಕೆಲವು ನಾಯಕರು ಮದ್ಯಪಾನ ಮಾಡಿ ಶ್ರೀಗಳಿಗೆ ಕಾಲ್ ಮಾಡ್ತಿದ್ದಾರೆ. ಮಾನಸಿಕ ಹಿಂಸೆ ಕೊಡ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಸಿ.ಸಿ.ಪಾಟೀಲ್ ಆರೋಪ ಮಾಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಎನ್ ವೈ ಗೋಪಾಲಕೃಷ್ಣ ಕಾಂಗ್ರೆಸ್‌ ಸೇರ್ಪಡೆ