Publish Date: Sun, 09 Apr 2023 (13:51 IST)
Updated Date: Sun, 09 Apr 2023 (13:34 IST)
ದಿಸ್ಪುರ್ : ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅಸ್ಸಾಂ ಘಟಕದ ಇಬ್ಬರು ಉನ್ನತ ನಾಯಕರನ್ನು ಬಾರ್ಪೇಟಾದಲ್ಲಿ ಬಂಧಿಸಲಾಗಿದೆ. ಪಿಎಫ್ಐನ ರಾಜ್ಯ ಅಧ್ಯಕ್ಷ ಅಬು ಸಮಾ ಅಹ್ಮದ್ ಹಾಗೂ ರಾಜ್ಯ ಕಾರ್ಯದರ್ಶಿ ಜಾಕಿರ್ ಹುಸೇನ್ ಬಂಧಿತರು ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತೊಂದು ನಿಷೇಧಿತ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ನಾಯಕ ಸಾಹಿದುಲ್ ಇಸ್ಲಾಂನನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 1.5 ಲಕ್ಷ ರೂ. ನಾಲ್ಕು ಮೊಬೈಲ್ ಫೋನ್ಗಳು ಮತ್ತು ಕೆಲವು ಕರಪತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.