Select Your Language

Notifications

webdunia
webdunia
webdunia
webdunia

ಮೋದಿ ಹಟಾವೋ, ದೇಶ್ ಬಚಾವೋ ಪೋಸ್ಟರ್ ಪ್ರಕರಣ

ಮೋದಿ ಹಟಾವೋ, ದೇಶ್ ಬಚಾವೋ ಪೋಸ್ಟರ್ ಪ್ರಕರಣ
ನವದೆಹಲಿ , ಶುಕ್ರವಾರ, 31 ಮಾರ್ಚ್ 2023 (14:36 IST)
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೇಪಾರ್ಹ ಪೋಸ್ಟರ್ ಅಂಟಿಸಿದ ಆರೋಪದಡಿ ಗುಜರಾತ್ನ 8 ಮಂದಿಯನ್ನು ಬಂಧಿಸಲಾಗಿದೆ. ಇದುವರೆಗೆ 185 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 
ಎಎಪಿ, ಪ್ರಧಾನಿ ವಿರುದ್ಧ ದೇಶಾದ್ಯಂತ ಪೋಸ್ಟರ್ ಅಭಿಯಾನ ಆರಂಭಿಸಿ `ಮೋದಿ ಹಟಾವೋ, ದೇಶ್ ಬಚಾವೋ’ ಅಭಿಯಾನ ಆರಂಭಿಸಿದ ಕೇವಲ ಒಂದು ದಿನದ ನಂತರ ಈ ಬಂಧನವಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಗಳು ಸರ್ಕಾರಿ ಆಸ್ತಿಗೆ ಹಾನಿ ಮಾಡಲು ಪ್ರಯತ್ನಿಸಿದ್ದರು ಎಂದು ಗುಜರಾತ್ ಪೊಲೀಸರು ತಿಳಿಸಿದ್ದಾರೆ. 

ಈ ಬಗ್ಗೆ ಪ್ರತಿಕ್ರಿಯಿಸಿರುವ ಗುಜರಾತ್ ಎಎಪಿ ಮುಖ್ಯಸ್ಥ ಇಸುದನ್ ಗಧ್ವಿ, ಬಂಧಿತರೆಲ್ಲ ತಮ್ಮ ಪಕ್ಷದ ಕಾರ್ಯಕರ್ತರು ಎಂದು ಹೇಳಿಕೊಂಡಿದ್ದಾರೆ. ಕಾರ್ಯಕರ್ತರ ಬಂಧನದಿಂದ ಬಿಜೆಪಿ ಭಯಗೊಂಡಿದೆ ಎಂಬುದು ಅರ್ಥವಾಗುತ್ತದೆ. ಬಂಧನ ಬಿಜೆಪಿಯ ಸರ್ವಾಧಿಕಾರಿ ಧೋರಣೆಯನ್ನು ಸೂಚಿಸುತ್ತದೆ ಎಂದು ಆರೋಪಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೆಡಿಎಸ್ ಪಕ್ಷ ನಾನು ಬಿಡ್ಲಿಲ್ಲ : ಎಟಿ ರಾಮಸ್ವಾಮಿ