ರಾಯಚೂರು : 10ನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಸರ್ಕಾರಿ ಸ್ವಾಮ್ಯದ ಶಾಲೆಯೊಂದರ ಮುಖ್ಯೋಪಾಧ್ಯಾಯನನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
ಶಾಲೆಯ ಮುಖ್ಯೋಪಾಧ್ಯಾಯ ವಿ.ಕೆ.ಅಂಗಡಿ ಈ ಪ್ರಕರಣದ ಆರೋಪಿಯಾಗಿದ್ದು, ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪ್ರತಿದಿನ ಮೊಬೈಲ್ ಕರೆ ಮಾಡಿ ಹಾಗೂ ಮೆಸೇಜ್ ಮೂಲಕ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾಳೆ. ವಿದ್ಯಾರ್ಥಿನಿ ಮೊಬೈಲ್ ಕಾಲ್ ರೆಕಾರ್ಡ್ ಹಾಗೂ ವಾಟ್ಸಾಪ್ ಮೆಸೇಜ್ಗಳಿಂದ ಕಾಮುಕ ಮುಖ್ಯೋಪಾಧ್ಯಾಯನ ಬಣ್ಣ ಬಯಲಾಗಿದೆ.
ಹೇಳಿದ ಹಾಗೆ ಕೇಳದಿದ್ದರೆ ಪರೀಕ್ಷೆ ಆದ ಮೇಲೆ ಏನಾಗುತ್ತದೆ ನೋಡು ಎಂದು ಮುಖ್ಯೋಪಾಧ್ಯಾಯ ಬೆದರಿಕೆ ಹಾಕಿದ್ದಾನೆ. ಅಲ್ಲದೇ ನಿನಗೆ ಒಳ್ಳೆಯ ಆಫರ್ ಕೊಡುತ್ತೇನೆ. ನನ್ನ ಮನೆಗೆ ಒಂದು ಗಂಟೆ ಬಂದು ಹೋಗು ಎಂದು ವಿದ್ಯಾರ್ಥಿನಿಗೆ ಕಿರುಕುಳ ನೀಡುತ್ತಿದ್ದ. ಮುಖ್ಯೋಪಾಧ್ಯಾಯನ ಕಿರುಕುಳಕ್ಕೆ ಬೇಸತ್ತ ವಿದ್ಯಾರ್ಥಿನಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ವೇದಿಕೆಗೂ ದೂರು ಸಲ್ಲಿಸಿದ್ದಾಳೆ.