Select Your Language

Notifications

webdunia
webdunia
webdunia
webdunia

ಮಾದನಾಯಕನಹಳ್ಳಿ ಪೊಲೀಸ್ರಿಂದ ಬಿಜೆಪಿ ಮುಖಂಡರ ಬಂಧನ

ದಲಿತ‌ ಮಹಿಳೆ ಮೇಲೆ ಪ್ರಕರಣ ಮಾದನಾಯಕನಹಳ್ಳಿ ಪೊಲೀಸ್ರಿಂದ ಬಿಜೆಪಿ ಮುಖಂಡರ ಬಂಧನ
bangalore , ಶುಕ್ರವಾರ, 24 ಮಾರ್ಚ್ 2023 (15:20 IST)
ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ ಅನ್ನೋ ಕಾರಣಕ್ಕೆ ಮನೆ ಕಾಂಪೌಂಡ್ ಧ್ವಂಸ ಮಾಡಿ ದಲಿತ ಮಹಿಳೆ ಹಲ್ಲೆ ನಡೆಸಿದ್ದ ಹಿನ್ನೆಲೆ ಬಿಜೆಪಿ ಮುಖಂಡರ ಬಂಧನವಾಗಿದೆ. ಕಳೆದ ಶನಿವಾರ ಮಾದನಾಯಕನಹಳ್ಳಿ ಠಾಣಾ  ವ್ಯಾಪ್ತಿಯ ಚಿಕ್ಕಗೊಲ್ಲರಹಟ್ಟಿಯಲ್ಲಿ ಘಟನೆ ನಡೆದಿತ್ತು. ನವೀನ್  ಎಂಬುವವರ ಮನೆ ಕಾಂಪೌಂಡ್ ಧ್ವಂಸದ ವೇಳೆ ನವೀನ್ ತಾಯಿ ರಂಗಮ್ಮಗೆ ಬಿಜೆಪಿ ಮುಖಂಡ ಉಮೇಶ್ ಅವ್ಯಾಚ ಶಬ್ಧಗಳಿಂದ ನಿಂದಿಸಿದ್ರು. ಈ ವೇಳೆ ರಂಗಮ್ಮ ಉಮೇಶ್ ಗೆ ಕಪಾಳ ಮೋಕ್ಷ ಮಾಡಿದ್ರು ಇದಕ್ಕೆ ಪ್ರತಿಯಾಗಿ ಉಮೇಶ ಅಂಡ್ ಪಟಾಲಂ ರಂಗಮ್ಮ ಮೇಲೆ ಮಹಿಳೆ ಅನ್ನೋದನ್ನು ನೋದೆ ಹಲ್ಲೆ ನಡೆಸಿದ್ರು‌‌ ಘಟನೆ ಸಂಬಂಧ ಮಾದನಾಯಕನಹಳ್ಳಿ ಠಾಣೆಯಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯ ಉಮೇಶ್. ಪಂಚಾಯ್ತಿ ಅಧ್ಯಕ್ಷ ಗಂಗರಾಜು ಸೇರಿದಂತೆ ಮುಖಂಡರ ಮೇಲೆ ಅಲ್ರಾಸಿಟಿ ಕೇಸ್ ದಾಖಲಾಗಿತ್ತು. 
 
ಪ್ರಕರಣ ತನಿಖೆ ನಡೆಸಿದ ನೆಲಮಂಗಲ ಉಪ ವಿಭಾಗ ಡಿವೈಎಸ್ಪಿ ಗೌತಮ್ ಹಾಗೂ ಮಾದನಾಯಕನಹಳ್ಳಿ ಪೊಲೀಸ್ರು ಇಂದು ಆರೋಪಿಗಳನ್ನ ಬಂಧಿಸಿದ್ದು ಕೋರ್ಟ್ ಗೆ ಹಾಜರುಪಡಿಸಿದ್ದಾರೆ. ಬಿಜೆಪಿ ಮುಖಂಡರ ಬಂಧನಕ್ಕೆ  ದಲಿತ ಸಂಘಟನೆಗಳು ಪ್ರತಿಭಟನೆ ಕೂಡ ನಡೆಸಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಅಮೆಜಾನ್ನಲ್ಲಿ 2ನೇ ಸುತ್ತಿನ ವಜಾ ಪ್ರಕ್ರಿಯೆ ಆರಂಭ