Select Your Language

Notifications

webdunia
webdunia
webdunia
webdunia

ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ಫಾಸ್ಟ್ ಟ್ರ್ಯಾಕ್

Fast Track in KC General Hospital
bangalore , ಶುಕ್ರವಾರ, 24 ಮಾರ್ಚ್ 2023 (14:40 IST)
ಕೆಸಿ ಜನರಲ್ ಆಸ್ಪತ್ರೆಯಲ್ಲಿ OPD ಟೋಕನ್ ಪಡೆಯಲು ರೋಗಿಗಳು ನಿತ್ಯ ಪರದಾಡ್ತಿದ್ರು. ಗಂಟೆಗಟ್ಟಲೆ ಕ್ಯೂ ನಲ್ಲಿ ನಿಂತು ಸುಸ್ತಾಗ್ತಿದ್ರು. ಆದ್ರೆ ಇನ್ಮುಂದೆ ಕಾಯಂಗಿಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ OPD ಟೋಕನ್ ಪಡೆಯಲು ರೋಗಿಗಳು ಗಂಟೆಗಟ್ಟಲೆ ಕ್ಯೂನಲ್ಲೇ  ನಿಲ್ಲುತ್ತಿದ್ರು. ಆದ್ರೆ ಇನ್ಮುಂದೆ ಘಂಟೆಗಟ್ಟಲೇ ನಿಲ್ಲದೇ, ಜಸ್ಟ್ ಎ ಮಿನಿಟ್ ಗಳಲ್ಲೇ ಟೋಕನ್ ಪಡೆಯಬಹುದು. ಇಕ ಕೇರ್  ಆ್ಯಪ್ ನಲ್ಲಿ ನೋಂದಣಿಯಾಗಿ, ಆಸ್ಪತ್ರೆಯಲ್ಲಿರುವ ಫಾಸ್ಟ್ ಟ್ರ್ಯಾಕ್ ನ್ನು ಸ್ಕ್ಯಾನ್ ಮಾಡಿದ್ರೆ ಸಾಕು, ಕ್ಯೂ ನಲ್ಲಿ ನಿಲ್ಲದೇ ಡೈರೆಕ್ಟ್ ಆಗಿ, OPD ಟೋಕನ್ ಪಡೆಯಬಹುದು. ಎಸ್.ಆನ್ ಲೈನ್ ಸ್ಕ್ಯಾನ್ ಮೂಲಕ OPD ಸ್ಲಿಪ್ ಪಡೆಯುವ ರೋಗಿಗಳ ಸಂಖ್ಯೆ ಕೆಸಿ ಜನರಲ್ ಆಸ್ಪತ್ರೆಯಲ್ಲಿ ನಿಧಾನಕ್ಕೆ ಏರಿಕೆಯಾಗ್ತಿದೆ.

ನಿತ್ಯ ಆಸ್ಪತ್ರೆಗೆ ೧ ಸಾವಿರಕ್ಕೂ ಹೆಚ್ಚು ಹೊರ ರೋಗಿಗಳು ಚಿಕಿತ್ಸೆಗೆ ಬರ್ತಿದ್ರು. ಕ್ಯೂ ದೊಡ್ಡದಾಗಿ, ಘಂಟೆಗಟ್ಟಲೆ ನಿಲ್ತಿದ್ರು. ಸದ್ಯ ಪ್ರತಿದಿನ ಕೆಸಿಜೆ ಆಸ್ಪತ್ರೆಯಲ್ಲಿ ೩೦೦ಕ್ಕೂ ಹೆಚ್ಚು ಜನ ಈಗ ಇಕ ಕೇರ್ ಮೂಲಕ ನೋಂದಣಿ ಮಾಡಿಕೊಂಡು,   ಚಿಕಿತ್ಸೆ ಪಡೆಯುತ್ತಿದ್ದಾರೆ. ಸಮಯವೂ ಉಳಿತಾಯ, ತ್ವರಿತಗತಿಯ ಚಿಕಿತ್ಸೆಯು ಪಡೆದಂತಾಗುತ್ತಿದೆ. ಸ್ಕ್ಯಾನ್ ಮಾಡಿ ಟೋಕನ್ ಪಡೆಯೋದರ ಬಗ್ಗೆ ಮಾಹಿತಿ ನೀಡೋದಕ್ಕೆ ಆಸ್ಪತ್ರೆಯ ಹೊರ ಭಾಗದಲ್ಲಿ ರೋಗಿಗಳಿಗೆ ಆನ್ ಲೈನ್ ಮೂಲಕ ಹೇಗೆ ನೋಂದಣಿ ಮಾಡಿಕೊಳ್ಳಬೇಕೆಂದು ತಿಳಿಸಿಕೊಡ್ತಿದ್ದಾರೆ. ಇನ್ನೂ ಆನ್ ಲೈನ್ ಮೂಲಕ OPD ಸ್ಲಿಪ್ ಕೊಡಲು ಪ್ರತ್ಯೇಕವಾಗಿ ಫಾಸ್ಟ್ ಟ್ರ್ಯಾಕ್ ಕೌಂಟರ್ ಓಪನ್ ಮಾಡಲಾಗಿದೆ.

ಪ್ಲೇ ಸ್ಟೋರ್ ನಲ್ಲಿ ಇ ಕೇರ್ ಆ್ಯಪ್ ಡವಲಪ್ ಮಾಡಿಕೊಂಡು, ರಿಜಿಸ್ಟರ್ ಮಾಡಿಕೊಂಡ್ರೆ, ಒಂದೇ ಐಡಿ ಮೇಲೆ ಐದು ಜನ ತೋರಿಸಿಕೊಳ್ಳಬಹುದು. ನವೆಂಬರ್ ೧೫ನೇ ತಾರೀಖು ನಂದು ಕೆಸಿ ಜನರಲ್ ಆಸ್ಪತ್ರೆಯಲ್ಲಿ ಈ ಆ್ಯಪ್ ನ ಅಳವಡಿಸಿಕೊಂಡಿದ್ದು ಉತ್ತಮ ಸ್ಪಂದನೆ ಸಿಗ್ತಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಬಿಎಂಟಿಸಿಯಲ್ಲಿ ಕಂಡಕ್ಟರ್ ಸಜೀವ ದಹನ ಪ್ರಕರಣಕ್ಕೆ ಟ್ವಿಸ್ಟ್