Select Your Language

Notifications

webdunia
webdunia
webdunia
webdunia

ರೈಲ್ವೆ ಪೊಲೀಸರಿಂದ ಟ್ರಾವೆಲರ್ ಟಿಕೆಟ್ ಎಕ್ಸಾಮಿನರ್ ಬಂಧನ ಪ್ರಕರಣ ಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್

Twist on twist for case of arrest of traveler ticket examiner by railway police
bangalore , ಸೋಮವಾರ, 27 ಮಾರ್ಚ್ 2023 (14:43 IST)
ಕೆ.ಆರ್.ಪುರಂ ರೈಲ್ವೆ ನಿಲ್ದಾಣದಲ್ಲಿ ಟಿಕೆಟ್ ಚೆಕ್ ಮಾಡ್ತಿದ್ದ TTE ಸಂತೋಷ್ ಮೇಲೆ ಬಂಗಾಳ ಮೂಲದ ಪಿಯಾಲಿ ಬರ್ಮನ್ ಎಂಬಾಕೆ ದೂರು ನೀಡಿದ್ದಾಳೆ.ಇನ್ನೂ TTE ಸಂತೋಷ ಸ್ವತಃ ಈ ವಿಚಾರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
 
ಬ್ಯಾಗ್ ನಲ್ಲಿ ಟಿಕೆಟ್ ಇದೆ ತೋರಿಸ್ತೀನಿ ಎಂದು ಮಹಿಳೆ ಪಿಯಾಲಿ ಬರ್ಮಲ್ ಹೇಳಿದ್ರು.ಅದರೆ ಪಿಯಾಲಿ ಬರ್ಮಲ್ ಬಳಿ ಯಾವುದೇ ಟಿಕೆಟ್ ಇರಲಿಲ್ಲ.ಸ್ನೇಹಿತರ ಜೊತೆ ಗುಂಪಿನಲ್ಲಿ ಮಹಿಳೆ ಬಂದಿದ್ದಳು.KJM ಬಳಿ ( ಕೃಷ್ಣರಾಜಪುರ ರೈಲು ನಿಲ್ದಾಣ) ಬಳಿ ಪಿಯಾಲಿ ಬರ್ಮಲ್ ಮೊದಲು ಇಳಿದುಕೊಂಡಿದ್ದಾರೆ.ನಂತರದಲ್ಲಿ ಕೆ.ಆರ್.ಪುರಂ ರೈಲ್ವೆ ನಿಲ್ದಾಣದಲ್ಲಿ TTE ಸಂತೋಷ್ ಟಿಕೆಟ್ ಚೆಕ್ ಮಾಡ್ತಿದ್ದ.ಸಂತೋಷ್ ಗೆ ಯಾವುದೇ ಕುಡಿಯುವ ಅಭ್ಯಾಸ ಇಲ್ಲ ಆದರೆ ಕೆಲವು ವರ್ಷಗಳ ಹಿಂದೆ ಆಕ್ಸಿಡೆಂಟ್ ಅದ ಕಾರಣದಿಂದ ಗಲಾಟೆ ಅಥವಾ ಟೆನ್ಶನ್ ಆದಾಗ ಸಂತೋಷ್ ಗೆ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ.ಇನ್ನೂ ‌ಈ ಪ್ರಕರಣ ಸಂಬಂಧ ದಂಡು ರೈಲ್ವೆ ಪೊಲೀಸರಿಗೆ ಮಹಿಳೆ ದೂರು ನೀಡಿದ್ದಾಳೆ.ಕುಡಿದು ಅಸಭ್ಯ ವರ್ತನೆ ಮಾಡಿದ್ದಾರೆಂದು ದೂರಿನಲ್ಲಿ ಮಹಿಳೆ ಆರೋಪಿಸಿದ್ದಾಳೆ ಎಂದು ಟಿಟಿಇ ಸಂತೋಷ್ ಸ್ಪಷ್ಟನೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೊರ್ಡ್ ಎಕ್ಸಾಂಗೆ ಸುಪ್ರೀಂ ಗ್ರೀನ್ ಸಿಗ್ನಲ್