Publish Date: Sat, 08 Apr 2023 (18:40 IST)
Updated Date: Sat, 08 Apr 2023 (18:14 IST)
ಗುಜರಾತ್ ಮೂಲದ ಅಮುಲ್ ವಿರುದ್ಧ ಕರ್ನಾಟಕದಲ್ಲಿ ಅಭಿಯಾನ ನಡೆಸಲಾಗುತ್ತಿರುವ ವಿಚಾರ ಕುರಿತು KPCC ಅಧ್ಯಕ್ಷ D.K. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಂದಿನಿ ನಮ್ಮದು.. 80 ಲಕ್ಷ ರೈತರು ಹಸುಗಳನ್ನ ಸಾಕುತ್ತಿದ್ದಾರೆ.. ರೈತರ ಹಾಲಿಗೆ ಕಡಿಮೆ ಬೆಲೆ ಕೊಡ್ತಿದ್ದಾರೆ.. ನಂದಿನಿ ಬ್ರ್ಯಾಂಡ್ ಏನ್ ಕಡಿಮೆ ಇದೆ..ಗುಜರಾತ್ನಿಂದ ಬಂದು ಮಿಕ್ಸ್ ಮಾಡ್ತಿದ್ದಾರೆ.. ನಮ್ಮ ರೈತರಿಗೆ ಮೊದಲು ಬೆಲೆ ಕೊಡಬೇಕು ಎಂದು ಆಗ್ರಹಿಸಿದ್ರು. ಈ ಬಿಜೆಪಿ ಸರ್ಕಾರವನ್ನ ಕಿತ್ತು ಒಗೆಯಬೇಕು, ಸಚಿವ S.T. ಸೋಮಶೇಖರ್ ಕೈಲಿ ಏನೂ ಇಲ್ಲ, ಮಿಲ್ಕ್ ಮಿನಿಸ್ಟರ್ ಕೈಯಲ್ಲೂ ಏನೂ ಆಗ್ತಿಲ್ಲ. ಅವರೆಲ್ಲಾ ಕೈಗೆ ಬಳೆ ತೊಟ್ಟುಕೊಂಡಿದ್ದಾರೆ ಎಂದು ಆರೋಪಿಸಿದ್ರು.