ಚಾಮರಾಜನಗರದಲ್ಲಿನ ಬಂಡೀಪುರ ಅರಣ್ಯವನ್ನ ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯವೆಂದು ಘೋಷಿಸಿ 50 ವರ್ಷಗಳು ಸಂದ ಹಿನ್ನೆಲೆ ನಾಳೆ ಪ್ರಧಾನಿ ನರೇಂದ್ರ ಮೋದಿ ಬಂಡೀಪುರ ಅಭಯಾರಣ್ಯಕ್ಕೆ ಭೇಟಿ ನೀಡಲಿದ್ದಾರೆ. ಇಂದು ರಾತ್ರಿ 8.40ಕ್ಕೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಆಗಮಿಸಲಿದ್ದು, ಬಳಿಕ ವಿಮಾನ ನಿಲ್ದಾಣದಿಂದ ರಸ್ತೆ ಮಾರ್ಗವಾಗಿ ರಾತ್ರಿ 8.50ಕ್ಕೆ ಮೈಸೂರಿನ ರಾಡಿಸನ್ ಬ್ಲೂ ಹೋಟೆಲ್ಗೆ ತೆರಳಲಿದ್ದಾರೆ. ಇಂದು ರಾತ್ರಿ ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಬಳಿಕ ನಾಳೆ ಬೆಳಗ್ಗೆ 6.20ಕ್ಕೆ ಹೋಟೆಲ್ನಿಂದ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಬಂಡೀಪುರಕ್ಕೆ ತೆರಳಲಿದ್ದಾರೆ. ಇನ್ನು ಈ ಕುರಿತು KPCC ಅಧ್ಯಕ್ಷ D.K. ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಮೋದಿ ಎಷ್ಟು ಬಾರಿ ಬೇಕಾದ್ರೂ ಟೂರ್ ಬರಲಿ, ದಿನಾ ಇಲ್ಲೇ ಇರಲಿ, ನಮಗೆ ಬೇಜಾರಿಲ್ಲ.. ಅವರ ಪಾರ್ಟಿ ವೀಕ್ ಆಗಿದೆ ಅಂತಾ ಅರ್ಥ ಆಗಿದೆ. ಅವರದ್ದು 60-65 ಸೀಟ್ ಅಷ್ಟೇ, ಅವರು ಸೋಲನ್ನ ಒಪ್ಪಿಕೊಳ್ತಿದ್ದಾರೆ ಎಂದು ಲೇವಡಿ ಮಾಡಿದ್ರು.. ಇನ್ನು ಕಾಂಗ್ರೆಸ್ ಬಂಡಾಯ ಕುರಿತು ಪ್ರತಿಕ್ರಿಯಿಸಿದ ಡಿಕೆಶಿ, ಕಾಂಗ್ರೆಸ್ ಪಾರ್ಟಿ ಸಮುದ್ರವಿದ್ದಂತೆ, ನೂರಾರು ಹೊಳೆಗಳು ಬಂದು ಸೇರಿಕೊಳ್ತಾವೆ.. ಎಷ್ಟು ಜನ ಬೇರೆ ಪಾರ್ಟಿಗಳಿಂದ ಕಾಂಗ್ರೆಸ್ಗೆ ಬಂದಿಲ್ವಾ? ಎಂದು ಪ್ರಶ್ನಿಸಿದ್ರು. ಮತ್ತೊಂದೆಡೆ ಪ್ರಧಾನಿ ನರೇಂದ್ರ ಮೋದಿ ಆಗಮನ ಕುರಿತು ಮಾಜಿ ಸಿಎಂ HDK ಕುಹಕವಾಡಿದ್ದು, ಪ್ರಧಾನಿ ಹುಲಿ ವಿಹಾರಕ್ಕೆ ಬರುತ್ತಿದ್ದಾರೆ, ರಾಜ್ಯದ ಜನತೆಯ ವಿಹಾರಕ್ಕೆ ಅಲ್ಲ. ರಾಜ್ಯದ ಜನರ ಕಷ್ಟಕ್ಕಾಗಿ ಅಲ್ಲ ಎಂದು ಲೇವಡಿ ಮಾಡಿದ್ದಾರೆ.