Publish Date: Sat, 08 Apr 2023 (20:05 IST)
Updated Date: Sat, 08 Apr 2023 (20:02 IST)
ಕಡೂರು ಮಾಜಿ ಶಾಸಕ Y.S.V ದತ್ತಾ JDSನಿಂದ ಟಿಕೆಟ್ ಕನ್ಫರ್ಮ್ ಆಗಿದ್ರೂ ಸಹ JDS ವರಿಷ್ಠರೊಂದಿಗೆ ಮುನಿಸಿಕೊಂಡು ಕಾಂಗ್ರೆಸ್ ಮನೆ ಸೇರಿದ್ರು.ಆದರೆ ದತ್ತಾ ಪವರ್ ಆಡಿಯೋದಲ್ಲಿ KPCC ಅಧ್ಯಕ್ಷ D.K. ಶಿವಕುಮಾರ್ ಬಗ್ಗೆ ವಿವಾದಾತ್ಮಕವಾಗಿ ಮಾತನಾಡಿದ್ದು, ಕಾಂಗ್ರೆಸ್ ಟಿಕೆಟ್ ಮಿಸ್ ಆಗಲು ಕಾರಣವಾಗಿದೆ. ಕೈ ಟಿಕೆಟ್ ಮಿಸ್ ಆದ ಹಿನ್ನೆಲೆಯಲ್ಲಿ ಅವರು ಕಾಂಗ್ರೆಸ್ಗೂ ಗುಡ್ಬೈ ಹೇಳುವ ಸಾಧ್ಯತೆಯಿದೆ.. ಈ ಹಿನ್ನೆಲೆಯಲ್ಲಿ ಕಡೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದ್ Y.S.V ದತ್ತಾ ಜೊತೆ ಸಂಧಾನ ಸಭೆ ನಡೆಸಿದ್ದು, ಈ ಸಭೆ ವಿಫಲವಾಗಿದೆ.. ಸಂಧಾನ ಸಭೆಯಲ್ಲಿ Y.S.V ದತ್ತಾ ಕಾಂಗ್ರೆಸ್ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ, ಬೆಂಬಲಿಗರ ನಿರ್ಧಾರವೇ ಅಂತಿಮ ಎಂದು ಹೇಳಿದ್ದಾರೆ.. ದತ್ತಾ ಮರಳಿ JDS ಸೇರ್ತಾರಾ ಅಥವಾ AAP ಪಕ್ಷಕ್ಕೆ ಜಂಪ್ ಮಾಡ್ತಾರಾ? ಇಲ್ಲವೇ ಪಕ್ಷೇತರರಾಗಿ ಸ್ಪರ್ಧಿಸಿ ಕಾಂಗ್ರೆಸ್, JDSಗೆ ಟಕ್ಕರ್ ಕೊಡ್ತಾರಾ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.