Publish Date: Sat, 08 Apr 2023 (18:10 IST)
Updated Date: Sat, 08 Apr 2023 (17:52 IST)
ರಾಜ್ಯದಲ್ಲಿನ ಅಮುಲ್, ನಂದಿನಿ ಜಟಾಪಟಿಗೆ ಸಚಿವ ಡಾ.K. ಸುಧಾಕರ್ ತಿರುಗೇಟು ನೀಡಿದ್ದಾರೆ. ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೇ ಸೇನೆ, ತಿರುಪತಿ ತಿರುಮಲ, ಮಹಾರಾಷ್ಟ್ರಗೆ ನಮ್ಮ ಹಾಲು ಹೋಗ್ತಿದೆ. ದೆಹಲಿಗೂ ಹೋಗಲು ಪ್ರಯತ್ನ ನಡೆದಿದೆ. ಹೆರಿಟೇಜ್, ದೊಡ್ಲಾ, ಆರೋಕ್ಯ ಹಾಲನ್ನು ನಮ್ಮ ರಾಜ್ಯದಲ್ಲಿ ಹಿಂದಿನಿಂದಲೂ ಮಾರುತ್ತಿದ್ದಾರೆ.. ಹಾಗಂತ ಅಮುಲ್ ಅಂದ್ರೆ ಬಿಜೆಪಿ. ನಂದಿನಿ ಅಂದ್ರೆ ಕಾಂಗ್ರೆಸ್ಸಾ ಎಂದು ಕಾಂಗ್ರೆಸ್ಗೆ ತಿರುಗೇಟು ನೀಡಿದ್ರು. ಕಾಂಗ್ರೆಸ್ ಇದೆಲ್ಲ ಬಿಡಬೇಕು. ಕಾಮಾಲೆ ಕಣ್ಣಿನಿಂದ ನೋಡೋದನ್ನ ಕಾಂಗ್ರೆಸ್ನವರು ಬಿಡಬೇಕು.. ಈಗಾಗಲೇ ಪಾತಾಳಕ್ಕೆ ಕಚ್ಚಿದ್ದೀರಿ. ಅಪಹಾಸ್ಯಕ್ಕೆ ಈಡಾಗಬೇಡಿ ಎನ್ನವ ಮೂಲಕ ಕಾಂಗ್ರೆಸ್ಗೆ ಸುಧಾಕರ್ ಡಿಚ್ಚಿ ಹೊಡೆದ್ರು