Select Your Language

Notifications

webdunia
webdunia
webdunia
webdunia

ಜಾತಿಗಣತಿ ನೆಪ, ಫ್ರೀ ಕರೆಂಟ್ ಕಟ್ ಮಾಡಲು ಸರ್ಕಾರದಿಂದ ಪ್ಲ್ಯಾನ್: ಆರ್ ಅಶೋಕ್ ವಾಗ್ದಾಳಿ

R Ashoka

Krishnaveni K

ಬೆಂಗಳೂರು , ಗುರುವಾರ, 25 ಸೆಪ್ಟಂಬರ್ 2025 (11:25 IST)
ಬೆಂಗಳೂರು: ಜಾತಿಗಣತಿ ನೆಪದಲ್ಲಿ ಗ್ಯಾರಂಟಿ ಯೋಜನೆ ಗೃಹಜ್ಯೋತಿ ಫಲಾನುಭವಿಗಳ ಸಂಖ್ಯೆ ಕಡಿಮೆ ಮಾಡಲು ಸರ್ಕಾರ ಪ್ಲ್ಯಾನ್ ಮಾಡಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

30 ದಿನಗಳ ಬದಲಾಗಿ 40 ದಿನಗಳ ರೀಡಿಂಗ್ ತೆಗೆದುಕೊಳ್ಳುವ ಮೂಲಕ ಫಲಾನುಭವಿಗಳ ಸರಾಸರಿ ವಿದ್ಯುತ್ ಬಳಕೆ ಮಿತಿ ಏರಿಸಿ ಉಚಿತ ಭಾಗ್ಯ ಕಟ್ ಆಗಿ ಪೂರ್ಣ ವಿದ್ಯುತ್ ಬಿಲ್ ಕಟ್ಟುವ ಪರಿಸ್ಥಿತಿ ಎದುರಾಗಿದೆ ಎಂಬ ಪತ್ರಿಕಾ ವರದಿಗಳ ಆರೋಪಗಳ ಬೆನ್ನಲ್ಲೇ ಅಶೋಕ್ ಟೀಕಾಪ್ರಹಾರ ನಡೆಸಿದ್ದಾರೆ.

‘ಗೃಹಜ್ಯೋತಿ ಫಲಾನುಭವಿಗಳ ಸಂಖ್ಯೆ ಕಡಿತಕ್ಕೆ ಕಾಂಗ್ರೆಸ್ ಸರ್ಕಾರದ ಷಡ್ಯಂತ್ರ! ಲಕ್ಷಾಂತರ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡುವ ಮೂಲಕ ಬಡವರ ಅನ್ನಭಾಗ್ಯಕ್ಕೆ ಕತ್ತರಿ ಹಾಕುತ್ತಿರುವ ಕಾಂಗ್ರೆಸ್ ಸರ್ಕಾರ ಈಗ 30 ದಿನಗಳ ಬದಲಾಗಿ, 40 ದಿನಗಳಿಗೆ ವಿದ್ಯುತ್ ಮೀಟರ್ ರೀಡಿಂಗ್ ತೆಗೆದುಕೊಳ್ಳುವ ಮೂಲಕ ಫಲಾನುಭವಿಗಳ ವಿದ್ಯುತ್ ಬಳಕೆಯ ಸರಾಸರಿ ಮಿತಿ ಏರಿಸಿ, ಗೃಹಿಜ್ಯೋತಿ ಯೋಜನೆಯಿಂದ ಅನರ್ಹಗೊಳಿಸುವ ಹುನ್ನಾರ ಮಾಡುತ್ತಿದೆ.

ಕಾಕಾ ಪಾಟೀಲನಿಗೂ ಫ್ರೀ, ಮಹಾದೇವಪ್ಪನಿಗೂ ಫ್ರೀ ಎಂದು ಬೊಗಳೆ ಬಿಟ್ಟು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಈಗ ಒಂದೊಂದೇ ಗ್ಯಾರೆಂಟಿ ಯೋಜನೆಯನ್ನು ಹಿಂಬಾಗಿಲ ಮೂಲಕ ಬಂದ್ ಮಾಡಲು ಹೊರಟಿದೆ’ ಎಂದು ಕಿಡಿ ಕಾರಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ