Select Your Language

Notifications

webdunia
webdunia
webdunia
webdunia

ಕರ್ನಾಟಕ ಜಾತಿ ಗಣತಿಯಲ್ಲಿ ಎಲ್ಲವೂ ಅಯೋಮಯ: ಮೊದಲ ದಿನವೇ ಅಧಿಕಾರಿಗಳಿಗೆ ತಲೆನೋವು

Karnataka caste census

Krishnaveni K

ಬೆಂಗಳೂರು , ಮಂಗಳವಾರ, 23 ಸೆಪ್ಟಂಬರ್ 2025 (09:38 IST)
Photo Credit: AI Image
ಬೆಂಗಳೂರು: ಕರ್ನಾಟಕ ಜಾತಿ ಗಣತಿಯಲ್ಲಿ ನಿನ್ನೆ ಮೊದಲ ದಿನವೇ ಅಧಿಕಾರಿಗಳು ಸಾಕಷ್ಟು ಸಮಸ್ಯೆ ಎದುರಿಸಿದ್ದು, ಸೂಕ್ತ ವ್ಯವಸ್ಥೆಯಿಲ್ಲದೇ ಗಣತಿಗೆ ಇಳಿದು ಅಯೋಮಯವಾಗುವಂತೆ ಆಗಿದೆ.

ಜಾತಿ ಗಣತಿ ತರಾತುರಿಯಲ್ಲಿ ನಡೆಯುತ್ತಿದೆ ಎಂಬ ಆರೋಪಗಳ ನಡುವೆಯೂ ಸರ್ಕಾರ ನಿನ್ನೆಯಿಂದಲೇ ಹಠಕ್ಕೆ ಬಿದ್ದು ಗಣತಿ ಆರಂಭಿಸಿದೆ. ಬೆಸ್ಕಾಂ ಅಧಿಕಾರಿಗಳಿಂದಲೂ ಗಣತಿ ಮಾಡಿಸುತ್ತಿದೆ. ಆದರೆ ಮೊದಲ ದಿನವೇ ಸಾಕಷ್ಟು ವಿಘ್ನಗಳು ಎದುರಾಗಿವೆ.

ಮೊದಲ ದಿನವೇ ಗಣತಿದಾರರಿಗೆ ಕಿಟ್ ಸಿಕ್ಕಿರಲಿಲ್ಲ. ಕಿಟ್ ಸಿಕ್ಕವರಿಗೆ ಸರ್ವರ್ ಸಮಸ್ಯೆ, ಕೆಲವರಿಗೆ ಮೊಬೈಲ್ ನೆಟ್ ವರ್ಕ್ ಸಮಸ್ಯೆಯಾಗಿದೆ. ಇದರಿಂದಾಗಿ ನಿರೀಕ್ಷಿಸಿದಷ್ಟು ಕುಟುಂಬಗಳ ಗಣತಿ ನಿನ್ನೆ ಸಾಧ್ಯವಾಗಿಲ್ಲ.

ಮೊದಲ ದಿನ ಕೇವಲ 10,000 ಗಣತಿ ನಡೆದಿರಬಹುದಷ್ಟೇ ಎಂದು ಅಂದಾಜಿಸಲಾಗಿದೆ. ಗಣತಿದಾರರ ಮೊಬೈಲ್ ಗೆ ಅಪ್ಲಿಕೇಷನ್ ಗೆ ಲಾಗಿನ್ ಆಗಲು ಸಮಸ್ಯೆಗಳು ಎದುರಾದವು. ಇನ್ನು, ಸಿಬ್ಬಂದಿಗಳಲ್ಲೂ ಗೊಂದಲಗಳಿತ್ತು. ಸರಿಯಾದ ತರಬೇತಿ ಕೊರತೆಯಿಂದ ಅವರೂ ಗೊಂದಲಕ್ಕೀಡಾಗಿದ್ದರು. ಕಲಬುರಗಿ, ಹುಬ್ಬಳ್ಳಿ, ಶಿವಮೊಗ್ಗ, ಹಾವೇರಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಮಾತ್ರ ಇದೀಗ ಗಣತಿ ಆರಂಭವಾಗಿದೆ. ಬೆಂಗಳೂರು ಸೇರಿದಂತೆ ಕೆಲವು ಕಡೆ ಇನ್ನೂ ಸಿಬ್ಬಂದಿಗಳಿಗೆ ತರಬೇತಿ ನೀಡಿಲ್ಲ. ಹೀಗಾಗಿ ಗಣತಿ ಕೂಡಾ ಆರಂಭವಾಗಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಸೈಬರ್ ವಂಚಕರಿಂದ ಸುಧಾಮೂರ್ತಿ ಬಚಾವ್ ಆಗಿದ್ದು ಹೇಗೆ, ಇದು ನಿಮಗೂ ಪಾಠವಾಗುತ್ತೆ