Publish Date: Mon, 30 May 2022 (14:56 IST)
Updated Date: Mon, 30 May 2022 (14:58 IST)
ಕಲಬುರಗಿ : ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಪರೀಕ್ಷಾ ಅಭ್ಯರ್ಥಿಯಾಗಿದ್ದ ಶಾಂತಿಬಾಯಿ ಹಾಗೂ ಪತಿ ಬಸಯ್ಯಾ ನಾಯಕ ಎರಡು ತಿಂಗಳ ಬಳಿಕ ಸಿಐಡಿ ಬಲೆಗೆ ಬಿದ್ದಿದ್ದಾರೆ.
ಹೈದರಾಬಾದ್ನಲ್ಲಿ ಸಿಐಡಿ ಪೊಲೀಸರು ಶಾಂತಿಬಾಯಿ ಹಾಗೂ ಆಕೆಯ ಪತಿ ಬಸಯ್ಯಾ ನಾಯಕ್ನನ್ನು ಬಂಧನ ಮಾಡಿದ್ದಾರೆ.
ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ನಿವಾಸಿಯಾಗಿರುವ ಶಾಂತಿಬಾಯಿ ಪಿಎಸ್ಎ ಪರೀಕ್ಷೆಯಲ್ಲಿ ಪಾಸಾಗಿದ್ದು, ಮಂಜುನಾಥ್ ಮೇಳಕುಂದಿ ಎನ್ನುವವನಿಗೆ ಹಣ ನೀಡಿದ್ದರು.
ಇನ್ನೂ ಹೈದ್ರಾಬಾದ್ನಿಂದ ಕಲಬುರಗಿ ಕಡೆಗೆ ಶಾಂತಿಬಾಯಿ ಹಾಗೂ ಆಕೆಯ ಗಂಡ ಬಸಯ್ಯಾ ನಾಯಕ್ನನ್ನು ಸಿಐಡಿ ಪೊಲೀಸರು ಕರೆ ತರಲಿದ್ದಾರೆ.