Publish Date: Mon, 23 May 2022 (10:00 IST)
Updated Date: Mon, 23 May 2022 (10:06 IST)
ಬೆಂಗಳೂರು: ಮನೆ ಬಾಡಿಗೆ ಕೇಳುವ ನೆಪದಲ್ಲಿ ಬರುತ್ತಿದ್ದ ಖದೀಮರ ಗುಂಪು ಚಿನ್ನಾಭರಣ ದರೋಡೆ ಮಾಡುತ್ತಿದ್ದ ಖದೀಮರನ್ನು ನಗರದಲ್ಲಿ ಬಂಧಿಸಲಾಗಿದೆ.
ಮನೆ ಬಾಡಿಗೆ ನೋಡುವ ನೆಪದಲ್ಲಿ ಒಳಗೆ ಬಂದಿದ್ದ ಮೂವರು ಆರೋಪಿಗಳು ಒಳಗೆ ಗಲೀಜಾಗಿದೆ ನೋಡಿ ಎಂದು ಮಾಲಕಿಯನ್ನು ಒಳಗೆ ಕರೆಸಿಕೊಂಡಿದ್ದರು.
ಬಳಿಕ ಮಾಲಕಿಯ ಕೈ ಕಾಲು ಕಟ್ಟಿ ಹಾಕಿ ಚಿನ್ನಾಭರಣ ದೋಚಿದ್ದರು. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿತ್ತು. ವಿಚಾರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.