Publish Date: Sun, 22 May 2022 (10:23 IST)
Updated Date: Sun, 22 May 2022 (10:25 IST)
ಉಡುಪಿ: ಬೆಂಗಳೂರು ಮೂಲದ ಯುವ ಜೋಡಿಯೊಂದು ಉಡುಪಿಯ ಹೆಗ್ಗುಂಜೆಯಲ್ಲಿ ಕಾರಿನೊಳಗೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದೆ.
23 ವರ್ಷದ ಯುವಕ ಮತ್ತು ಯುವತಿ ಕಾರಿನೊಳಗೆ ಬೆಂಕಿಗೆ ಸುಟ್ಟು ಕರಕಲಾಗಿದ್ದಾರೆ. ಕಾರಿನಲ್ಲಿ ಬೆಂಕಿ ಕಂಡು ಸ್ಥಳೀಯರು ನಂದಿಸಲು ಯತ್ನಿಸಿದರೂ ಪ್ರಾಣ ಉಳಿಸಲಾಗಲಿಲ್ಲ.
ಇಬ್ಬರೂ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿತ್ತು. ಆತ್ಮಹತ್ಯೆಗೆ ಮುನ್ನ ಕುಟುಂಬಸ್ಥರಿಗೆ ಸಂದೇಶ ಕಳುಹಿಸಿದ್ದರು. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.