Select Your Language

Notifications

webdunia
webdunia
webdunia
webdunia

ಪಿಎಸ್‌ಐ ಪರಶುರಾಮ್ ಸಾವು ಪ್ರಕರಣ: ಶಾಸಕ ಚೆನ್ನಾರೆಡ್ಡಿ, ಪುತ್ರ ವಿರುದ್ಧ ದೂರು

PSI Parashuram Death Case

Sampriya

ಯಾದಗಿರಿ , ಶನಿವಾರ, 3 ಆಗಸ್ಟ್ 2024 (14:57 IST)
Photo Courtesy X
ಯಾದಗಿರಿ: ಪಿಎಸ್‌ಐ ಪರಶುರಾಮ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಯಾದಗಿರಿ ಶಾಸಕ ಚೆನ್ನಾರೆಡ್ಡಿ ಹಾಗೂ ಅವರ ಮಗನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ನಗರ ಪೊಲೀಸ್ ಠಾಣೆಯಲ್ಲಿ ಮುಂದುವರಿಯಲು ₹30 ಲಕ್ಷ ಹಣಕ್ಕೆ ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು, ಅವರ ಪುತ್ರ ಪಂಪನಗೌಡ (ಸನ್ನಿಗೌಡ) ಬೇಡಿಕೆ ಇಟ್ಟಿದ್ದರು ಎಂದು ಮೃತ ಪರಶುರಾಮ್ ಪತ್ನಿ ಶ್ವೇತಾ ಆರೋಪಿಸಿ, ಠಾಣೆ ಮೆಟ್ಟಿಲೇರಿದ್ದಾರೆ.

ಯಾದಗಿರಿ ಟೌನ್ ಪೊಲೀಸ್ ಠಾಣೆಗೆ ಕುಟುಂಬಸ್ಥರ ಜತೆ ಆಗಮಿಸಿ ಮೃತ ಪಿಎಸ್‌ಐ ಪತ್ನಿ ಶ್ವೇತಾ ಅವರು ದೂರು ನೀಡಿದ್ದಾರೆ.  ಈಗ ಭಾರತಿಯ ನ್ಯಾಯ ಸಂಹಿತೆ 108(3,5), ಸೆಕ್ಷನ್ 352 ಅಡಿಯಲ್ಲಿ ಶಾಸಕ ಚೆನ್ನಾರೆಡ್ಡಿ ಹಾಗೂ ಪುತ್ರ ಪಂಪನಗೌಡ ವಿರುದ್ಧ ಜಾಮೀನು ರಹಿತ ಸೆಕ್ಷನ್‌ ಅಡಿ ಪ್ರಕರಣ ದಾಖಲಾಗಿದೆ.

ಶ್ವೇತಾ ನೀಡಿದ ದೂರಿನಲ್ಲಿ ಏನಿದೆ: ಶಾಸಕರು ಹಣ ನೀಡುವಂತೆ ನಿರಂತರ ಒತ್ತಡ ಹೇರುತ್ತಿದ್ದರು. ಜಾಮೀನು ರಹಿತ ಸೆಕ್ಷನ್‌ ಅಡಿಯಲ್ಲಿ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಮೊದಲು ಶಾಸಕರ ಪುತ್ರನ ಬಂಧನವಾಗುವ ಸಾಧ್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೆಡಿಎಸ್ ಹಸಿರು ಶಾಲು, ಬಿಜೆಪಿ ನಾಯಕರು ಕೇಸರಿ ಶಾಲು: ಮುಡಾ ಹಗರಣ ವಿರುದ್ಧ ದೋಸ್ತಿಗಳ ಪಾದಯಾತ್ರೆ ಬಲು ಜೋರು