Select Your Language

Notifications

webdunia
webdunia
webdunia
webdunia

ಇವರೇ ನೋಡಿ ಮುಡಾ ಹಗರಣದಲ್ಲಿ ಪಾಲು ಪಡೆದ ಬಿಜೆಪಿ- ಜೆಡಿಎಸ್ ನಾಯಕರುಗಳು

ಇವರೇ ನೋಡಿ ಮುಡಾ ಹಗರಣದಲ್ಲಿ ಪಾಲು ಪಡೆದ ಬಿಜೆಪಿ- ಜೆಡಿಎಸ್ ನಾಯಕರುಗಳು

Sampriya

ಬೆಂಗಳೂರು , ಶುಕ್ರವಾರ, 26 ಜುಲೈ 2024 (15:14 IST)
ಬೆಂಗಳೂರು: ರಾಜ್ಯದಲ್ಲಿ ಸದ್ಯ ಮುಡಾ ಹಗರಣ ಭಾರೀ ಸದ್ದು ಮಾಡುತ್ತಿದ್ದು, ಜೆಡಿಎಸ್ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಪಟ್ಟು ಹಿಡಿದಿದೆ. ಇದೀಗ ಕಾಂಗ್ರೆಸ್ ಸಚಿವ ಭೈರತಿ ಸುರೇಶ್ ಅವರು ಮುಡಾದಲ್ಲಿ ಬದಲಿ ನಿವೇಶ ಪಡೆದುಕೊಂಡಿರುವ ಬಿಜೆಪಿ ಮತ್ತು ಜೆಡಿಎಸ್ ನಾಯಕರ ಪಟ್ಟಿಯನ್ನು ಬಿಡುಗಡೆ ಮಾಡಿ ವಿಪಕ್ಷಗಳಿಗೆ ತಿರುಗೇಟು ನೀಡಿದೆ.

ಇದರಲ್ಲಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ  ಹೆಸರು ಸಹ  ಇದ್ದು, ಈ ಪ್ರಕರಣ ಮತ್ತಷ್ಟು ಸಂಚಲನಕ್ಕೆ ಕಾರಣವಾಗಿದೆ.

ಇಂದು ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ  ಭೈರತಿ ಸುರೇಶ್ ಅವರು, ಸದನದಲ್ಲಿ ಸ್ಪೀಕರ್ ಅವಕಾಶ ನೀಡುತ್ತಿದ್ದರೆ ಅಲ್ಲೇ ಬಿಜೆಪಿಯವರ ಬಂಡವಾಳವನ್ನು ಬಿಚ್ಚಿಡುತ್ತಿದ್ದೆ. ಇದರೊಂದಿಗೆ ಹಲವು ಮಠಗಳಿಗೂ ನಿವೇಶ ಹಂಚಿಕೆಯಾಗಿದೆ.

ಇದರ ಜತೆಗೆ ಜಿ.ಟಿ.ದೇವೇಗೌಡ, ಸಿ.ಎನ್​.ಮಂಜೇಗೌಡ, ಹೆಚ್​.ವಿಶ್ವನಾಥ್​. ಸಾ.ರಾ.ಮಹೇಶ್, ಹೆಚ್.ಡಿ.ಕುಮಾರಸ್ವಾಮಿಗೂ  ಇವರಿಗೆಲ್ಲರಿಗೂ ಬದಲಿ ನಿವೇಶನ ಹಂಚಿಕೆಯಾಗಿದೆ ಎಂದು ಸ್ಪಷ್ಟಣೆ ನೀಡಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಆಷಾಢ ಶುಕ್ರವಾರ ಚಾಮುಂಡಿ ತಾಯಿ ದರ್ಶನಕ್ಕೆ ಸಾಮಾನ್ಯರಿಗೆ ರಷ್: ವಿಐಪಿಯಾಗಿ ಬಂದ ಸೂರಜ್ ರೇವಣ್ಣ