Select Your Language

Notifications

webdunia
webdunia
webdunia
Thursday, 3 April 2025
webdunia

ವಿಜಯೇಂದ್ರರ ಎಲ್ಲ ಹಗರಣ ಬಿಚ್ಚಿಡುತ್ತೇನೆ: ಗುಡುಗಿದ ಡಿಕೆ ಶಿವಕುಮಾರ್‌

BJP President Vijayendra

Sampriya

ರಾಮನಗರ , ಶುಕ್ರವಾರ, 2 ಆಗಸ್ಟ್ 2024 (17:37 IST)
Photo Courtesy X
ರಾಮನಗರ: ಬಿಜೆಪಿ ಸರ್ಕಾರದಲ್ಲಿರುವಾಗ ಯಾವ ಬ್ಯಾಂಕ್‌ಗೆ ಎಷ್ಟು ಹಣ ಹೋಗಿದೆ. ಅವರ ಅವಧಿಯಲ್ಲಿ ನಡೆದ ಹಗರಣಕ್ಕೆ ಯಾರು ಜವಾಬ್ದಾರರು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರಶ್ನಿಸಿದರು.

ಮೈಸೂರು ಪಾದಯಾತ್ರೆ ಕೈಗೊಂಡಿರುವ ಬಿಜೆಪಿ ಮತ್ತು ಜೆಡಿಎಸ್​​ಗೆ ಟಕ್ಕರ್ ಕೊಡಲು ನಡೆಸಿದ ಕಾಂಗ್ರೆಸ್ ಜನಾಂದೋಲನ ಸಭೆಯಲ್ಲಿ ಮಾತನಾಡಿದ ಅವರು, ನಮ್ಮನ್ನು ಜೈಲಿಗೆ ಹಾಕಲು ಬಿಜೆಪಿ ಸಂಚು ಮಾಡುತ್ತಿದೆ.ನಾನು ಜೈಲಿಗೆ ಹೋಗಲು ರೆಡಿ ಇದ್ದೇನೆ. ನನ್ನಂತಹ ಬೇಕಾದಷ್ಟು ಜನ ಕಾಂಗ್ರೆಸ್​​ನಲ್ಲಿ ಹುಟ್ಟಿಕೊಳ್ಳುತ್ತಾರೆ ಎಂದರು.

ಭಷ್ಟಚಾರಗಳ ಪಿತಾಮಹ ಎಂದು ಹೇಳಿರುವ ವಿಜಯೇಂದ್ರ ಅವರ ಎಲ್ಲ ಹಗರಣಗಳನ್ನು ಬಿಚ್ಚಿಸುತ್ತೇನೆ ಎಂದು ಎಚ್ಚರಿಸಿದರು. ಗಂಡಸಾಗಿದ್ರೆ ಅವನು ಹೇಳಲಿ, ಅವನಿಗೆ ಗೌರವ ಕೊಡುತ್ತೇನೆ. ಅವನನ್ನ ಪಾರ್ಟಿ ಅಧ್ಯಕ್ಷ ಅಂತ ಒಪ್ಪಿಕೊಳ್ಳುತ್ತೇನೆ. ಯಾವ ಭ್ರಷ್ಟಾಚಾರ? ಏನು ತನಿಖೆಯಾಗಿದೆ? ಯಾವಾಗ ಆಗಿದೆ ಅಂತ ವಿವರಿಸಬೇಕೆಂದು ಸವಾಲ್ ಎಸೆದರು.

ನಾನು ಇಡಿ ಕೇಸ್ ನಲ್ಲಿ ಜೈಲಿಗೆ ಹೋಗಿದ್ದೆ‌. ಸುಪ್ರೀಂ ಕೋರ್ಟ್ ನಲ್ಲಿ ಇಡಿ ಕೇಸ್ ವಜಾ ಆಗಿದ್ದು ಗೊತ್ತಾ? ಇದಕ್ಕೆಲ್ಲ ಉತ್ತರ ಕೊಡುತ್ತೇನೆ ಸಮಯ ಬರಲಿ ಎಂದು ವಿಜಯೇಂದ್ರ ವಿರುದ್ಧ ಬಿಡದಿಯಲ್ಲಿ ಡಿಸಿಎಂ ಡಿಕೆಶಿ ಗುಡುಗಿದರು.

Share this Story:

Follow Webdunia kannada

ಮುಂದಿನ ಸುದ್ದಿ

ವಿಪಕ್ಷಗಳು ಪಾದಯಾತ್ರೆಗೆ ಸಿದ್ಧತೆ ಮಾಡಿದ್ದರೆ ಸೈಲೆಂಟ್ ಆಗಿ ಸಿಎಂ ಸಿದ್ದರಾಮಯ್ಯ ಇಲ್ಲಿದ್ದಾರೆ ನೋಡಿ