ಪೌರಕಾರ್ಮಿಕರ ತಾತ್ಕಾಲಿಕ ಪಟ್ಟಿಯಲ್ಲಿ ಅಕ್ರಮವನ್ನು ವಿರೋಧಿಸಿ ಪಾಲಿಕೆಯ ಕೇಂದ್ರ ಕಛೇರಿಯಲ್ಲಿ ಪ್ರತಿಭಟನೆ ಮಾಡಲಾಗ್ತಿದೆ.ಈ ಕೂಡಲೇ ಅಕ್ರಮ ಪಟ್ಟಿಯನ್ನು ಸ್ಥಗಿತಗೊಳಿಸಿ ಇಲ್ಲದಿದ್ದರೆ ಸ್ವಚ್ಚತಾ ಕಾರ್ಯಗಳಲ್ಲಿ ತೊಡಗಿರುವ ಪೌರ ಕಾರ್ಮಿಕರು ಹಾಗೂ ಚಾಲಕ ಸಹಾಯಕರು ನಾಳೆಯಿಂದ ಕೆಲಸ ಸ್ಥಗಿತಗೊಳಿಸಲ್ಲಿದ್ದಾರೆ.
ನಾಳೆಯಿಂದ ಪಾಲಿಕೆಯ ಸುತ್ತಲೂ ಕಸ ಸುರಿದು ಪ್ರತಿಭಟನೆ ಮಾಡಲಾಗುತ್ತದೆ.ಈಗಾಗಲೇ ಪ್ರತಿಭಟನೆಗೆ ಪಾಲಿಕೆಗೆ ಬಂದಿರುವ ಸಹಸ್ರಾರು ಪೌರ ಕಾರ್ಮಿಕರು ತಾತ್ಕಾಲಿಕ ಪಟ್ಟಿಯನ್ನು ರದ್ದು ಗೊಳಿಸಿ ನಮ್ಮನ್ನು ಖಾಯಂ ಗೊಳಿಸಸಬೇಕೆಂದು ಪಟ್ಟು ಹಿಡಿದಿದ್ದಾರೆ.ಪಾಲಿಕೆಗೆ ಮುತ್ತಿಗೆ ಹಾಕಲು ಸಹಸ್ರಾರು ಪೌರ ಕಾರ್ಮಿಕರು ಬಂದಿದ್ದಾರೆ