ಬೆಂಗಳೂರು: ಆಂಧ್ರ ಪ್ರದೇಶ ಐಟಿ ಸಚಿವ ನಾರಾ ಲೋಕೇಶ್, ಆರ್ ಎಸ್ಎಸ್ ಸಂಘಟನೆ ಜೊತೆಗೆ ಜಟಾಪಟಿ ಆಯ್ತು. ಈಗ ಸಚಿವ ಪ್ರಿಯಾಂಕ್ ಖರ್ಗೆ ಕಿತ್ತಾಟ ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ಜೊತೆ.
ಅಸ್ಸಾಂ ಮತ್ತು ಗುಜರಾತ್ ನಲ್ಲಿ ಸೆಮಿ ಕಂಡಕ್ಟರ್ ಕೈಗಾರಿಕೆಗಳು ಹೂಡಿಕೆ ಮಾಡುತ್ತಿರುವ ಬಗ್ಗೆ ಪ್ರಿಯಾಂಕ್ ಖರ್ಗೆ ಟೀಕಿಸಿದ್ದರು. ಕರ್ನಾಟಕದಲ್ಲಿ ಸಾಕಷ್ಟು ಸೌಲಭ್ಯ, ಮೂಲಸೌಕರ್ಯ, ಕೌಶಲ್ಯ ಇದ್ದರೂ ಈ ಕೈಗಾರಿಕೆಗಳು ಅಸ್ಸಾಂ, ಗುಜರಾತ್ ನ್ನೇ ಆಯ್ಕೆ ಮಾಡುತ್ತಿರುವುದು ಯಾಕೆ ಎಂದು ಕಿಡಿ ಕಾರಿದ್ದರು. ಅವರ ಈ ಕಾಮೆಂಟ್ ಗೆ ಪ್ರತಿಕ್ರಿಯಿಸಿದ್ದ ಸಿಎಂ ಹಿಮಂತ ಬಿಸ್ವ, ಪ್ರಿಯಾಂಕ್ ಖರ್ಗೆ ಓರ್ವ ಫಸ್ಟ್ ಕ್ಲಾಸ್ ಈಡಿಯೆಟ್ ಎಂದಿದ್ದರು.
ಇವರಿಬ್ಬರ ಕಿತ್ತಾಟಕ್ಕೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು, ಕೈಗಾರಿಕೆಗಳು ಕೇವಲ ಕರ್ನಾಟಕ, ಆಂಧ್ರ, ತಮಿಳುನಾಡಿನಂತಹ ರಾಜ್ಯಗಳಲ್ಲಿ ಮಾತ್ರ ಇರಬೇಕೇ? ಯಾವಾಗಲೂ ಇಂತಹ ಕಿತ್ತಾಟಗಳನ್ನೇ ಮಾಡುತ್ತಿರುತ್ತೀರಿ. ನಿಮ್ಮ ಖಾತೆಯ ಬಗ್ಗೆ ಯೋಚಿಸಿ. ನಿಮ್ಮ ಕ್ಷೇತ್ರವನ್ನು ಅಭಿವೃದ್ಧಿ ಮಾಡುವುದರತ್ತ ಗಮನಹರಿಸಿ ಎಂದು ಸಲಹೆ ನೀಡಿದ್ದಾರೆ.