ಬೆಂಗಳೂರು: ನಮ್ಮ ಆದಾಯ ಮತ್ತು ನಿಮ್ಮ ಆರ್ಎಸ್ಎಸ್ ಆದಾಯಗಳ ಮೂಲಗಳ ಬಗ್ಗೆ IT,ED ಆಡಿಟ್ ಆಗಲಿ, ತನಿಖೆಗೆ ನಾವು ಸಿದ್ದ, ನಿಮ್ಮ RSS ಸಿದ್ದವೇ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದಾರೆ.
 
									
			
			 
 			
 
 			
					
			        							
								
																	ಈ ಸಂಬಂಧ ಅವರು ಬಿಜೆಪಿಯನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡು ಪ್ರಶ್ನೆ ಮಾಡಿದ್ದಾರೆ. 
ಪ್ರಿಯಾಂಕ್ ಖರ್ಗೆ ಹಂಚಿಕೊಂಡ ಪೋಸ್ಟ್‌ನಲ್ಲಿ ಹೀಗಿದೆ. 
									
										
								
																	@BJP4Karnataka, ಕಳೆದ 50 ವರ್ಷಗಳಲ್ಲಿ ನಾವು ಗಳಿಸಿದ ಆಸ್ತಿ, ಆದಾಯಗಳೆಲ್ಲದರ ವಿವರಗಳೂ ಜನತೆಯ ಮುಂದಿದೆ, ಮತ್ತು ನಮ್ಮ ಆದಾಯಕ್ಕೆ ತೆರಿಗೆ ಪಾವತಿಸಲಾಗುತ್ತದೆ.
									
											
							                     
							
							
			        							
								
																	ಆದರೆ, ಕಳೆದ 100 ವರ್ಷಗಳಲ್ಲಿ ನಿಮ್ಮ ಮಾತೃ ಸಂಸ್ಥೆಯಾದ RSS ನೋಂದಾಯಿಸಿಲ್ಲ, ತೆರಿಗೆ ಪಾವತಿಸಿಲ್ಲ ಮತ್ತು ವಿಶ್ವದ ಅತ್ಯಂತ ಶ್ರೀಮಂತ NGO ಎನಿಸಿಕೊಂಡಿದೆ? ಇದು ಸಾಧ್ಯವಾಗಿದ್ದು ಹೇಗೆ?
									
			                     
							
							
			        							
								
																	ನಮ್ಮ ಆದಾಯ ಮತ್ತು ನಿಮ್ಮ ಆರ್ಎಸ್ಎಸ್ ಆದಾಯಗಳ ಮೂಲಗಳ ಬಗ್ಗೆ IT,ED ಆಡಿಟ್ ಆಗಲಿ, ತನಿಖೆಗೆ ನಾವು ಸಿದ್ದ, ನಿಮ್ಮ RSS ಸಿದ್ದವೇ @BJP4Karnataka
 ?