Publish Date: Tue, 11 Jul 2023 (21:03 IST)
Updated Date: Tue, 11 Jul 2023 (20:06 IST)
ಅಕ್ಕಿ ಬದಲು 34ರೂ ಸಾಲಲ್ಲ ಅನ್ನೋ ಬಿಜೆಪಿ ಆರೋಪ ವಿಚಾರವಾಗಿ ಪ್ರೀಯಾಂಕ ಖರ್ಗೆ ಹೇಳಿದ್ದಾರೆ.ನಾನು ಮೊದಲು ಕೂಡ ಹೇಳಿದ್ದೇನೆ.ಈ ಐದು ಯೋಜನೆ ಜನರಿಗೆ ಉಪಯೋಗ ಆಗ್ತಿದೆಯಾ ಇಲ್ವಾ.?ಉಚಿತವಾಗಿ ಬಸ್‌ನಲ್ಲಿ ಓಡಾಡ್ತಿದ್ದಾರೆ, ಅವರನ್ನೇ ಹೋಗಿ ಕೇಳಲಿ ಎಂದು ಮಾಜಿ ಶಾಸಕ ರೇಣುಕಾಚಾರ್ಯ ಒಂದು ಮಾತಾಡ್ತಾರೆ.ಇವರಿಗೆ ವಿಪಕ್ಷ ನಾಯಕನ ಆಯ್ಕೆ ಮಾಡಲಾಗಿಲ್ಲ.ಅವರ ಕೆಲ ಶಾಸಕರು ನಮ್ಮ ಯೋಜನೆಯನ್ನ ಚೆನ್ನಾಗಿದೆ ಅಂದ್ರು, ಕೆಲವರು ಚೆನ್ನಾಗಿಲ್ಲ ಅಂತಿದ್ದಾರೆ.ಈ ಸಲಹೆಯನ್ನ ಕೇಂದ್ರ ಸರ್ಕಾರಕ್ಕೆ ಕೊಡಲು ಹೇಳಿ.ಕೇಂದ್ರ ಸರ್ಕಾರದಿಂದ ಅಕ್ಕಿ ಕೊಡಿಸಲಿ.ಕೊಡದಿದ್ದಕ್ಕೆ ಅಲ್ಲವಾ DBT ಮಾಡ್ತಿದ್ದೇವೆ ಎಂದು ಬಿಜೆಪಿ ನಾಯಕರ ಹೇಳಿಕೆಗೆ ಪ್ರೀಯಾಂಕ ಖರ್ಗೆ ಕೌಂಟರ್ ಕೊಟ್ಟಿದ್ದಾರೆ.
ಉತ್ತರ ಕರ್ನಾಟಕ ಭಾಗದಲ್ಲಿ ಮಳೆಯಾಗದಿರೋ ವಿಚಾರವಾಗಿಯೂ ಪ್ರತಿಕ್ರಿಯಿಸಿದ್ದು,ಮಳೆ ವಾಡಿಕೆಯಷ್ಟು ಆಗ್ತಿಲ್ಲ.ಕಂದಾಯ ಸಚಿವರ ಜೊತೆ ಸಭೆ ನಡೆಸಿದ್ದೇವೆ.ಕುಡಿಯೋ ನೀರಿಗೆ ಹೆಚ್ಚು ಒತ್ತು ನೀಡಲಾಗ್ತಿದೆ ಎಂದು ಪ್ರೀಯಾಂಕ ಖರ್ಗೆ ಹೇಳಿದ್ರು.