Select Your Language

Notifications

webdunia
webdunia
webdunia
webdunia

ಟೆಕ್ಕಿಗಳೇ ಟಾರ್ಗೆಟ್, ಹಣ ಕೇಳೋ ನೆಪದಲ್ಲಿ ಮಾಡ್ತಿದ್ರು ಸುಲಿಗೆ..!

Techies are the target
bangalore , ಮಂಗಳವಾರ, 11 ಜುಲೈ 2023 (19:00 IST)
ಮಂಗಳಮುಖಿಯರ ಹಾವಳಿಯಂತೂ ಇತ್ತೀಚೆಗೆ ಕೇಳೋ ಹಾಗೇ ಇಲ್ಲ ಬಿಡಿ. ಅವ್ರಿಗೆ ಸರಿಯಾಗಿ ಕೆಲಸ ಸಿಕ್ಕಲ್ಲ, ಸರಿಯಾಗಿ ಬೆಲೆ ಕೊಡದೆ ಇರೋ ಈ ಸಮಾಜದಲ್ಲಿ ಬದುಕೋಕೆ ಕಷ್ಟ ಅಂತಾ ಅವ್ರು ಕೇಳ್ದಾಗ ಜನ ಅವ್ರಿಗೆ ಹಣ ಕೊಡೋದಲ್ದೆ ಆಶೀರ್ವಾದನೂ ಪಡೀತಾರೆ.. ಆದ್ರೆ ಕೇಳಿ ಪಡೆಯೋದನ್ನ ಬಿಟ್ಟು ಕೆಲ ಮಂಗಳಮುಖಿಯರು ಸುಲುಗೆ ಮಾಡೋಕೆ ಮುಂದಾಗಿದ್ದಾರೆ. ಹೀಗೆ ನಗರದಲ್ಲಿ ಸುಲಿಗೆ ಮಾಡ್ತಿದ್ದ ಮೂವರು ಮಂಗಳಮುಖಿಯರು ಓರ್ವ ಅಟೋ ಡ್ರೈವರ್ ಸೇರಿ ನಾಲ್ವರನ್ನ ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಪೊಲೀಸ್ ಸ್ಟೇಷನ್ ನಲ್ಲೂ ಸ್ಟೂಡಿಯೋದಲ್ಲಿ ಪೋಸ್ ಕೊಟ್ಟಂಗೆ ಫೋಟೋಗೆ ಪೋಸ್ ಕೊಟ್ಟಿರೋ ಇವ್ರೇ ನೋಡಿ ಸುಲಿಗೆ ಮಾಡ್ತಿದ್ದ ಮಂಗಳಮುಖಿಯರು.. ಸ್ನೇಹ, ಅವಿಷ್ಕಾ, ದೀಪಿಕಾ ಮತ್ತೆ ಈ ಡ್ರೈವರ್ ಪ್ರಕಾಶ್..  ನಾಲ್ವರೂ ಬಾಪೂಜಿ ನಗರದಲ್ಲಿ ವಾಸವಿದ್ರೂ ಮಾರತ್ತಹಳ್ಳಿ, ಸಂಪಿಗೇಹಳ್ಳಿ, ಕೊಡಿಗೇಹಳ್ಳಿ, ಸಹಕಾರ ನಗರ ಹೀಗೆ ಬೇರೆ ಬೇರೆ ಕಡೆ ಹೋಗಿ ಸುಲಿಗೆ ಮಾಡ್ತಿದ್ರು.. ಮುಂಜಾನೆ ಐದು ಗಂಟೆಗೇ ಆಟೋದಲ್ಲಿ ಫಿಲ್ಡಿಗಿಳಿತಿದ್ದ ನಾಲ್ವರು ಟಾರ್ಗೆಟ್ ಮಾಡ್ತಿದ್ದು ಮಾತ್ರ ಟೆಕ್ಕಿಗಳನ್ನ.. ಐಟಿಬಿಟಿ ಕಂಪನಿಗಳ ಅಕ್ಕಪಕ್ಕದ ರಸ್ತೆ, ಬಸ್ ಸ್ಟ್ಯಾಂಡ್ ಗಳ ಬಳಿ ಓಡಾಡ್ತಿದ್ದವರ ಬಳಿ ಹಣ ಕೇಳೋ ನೆಪದಲ್ಲಿ ಹೋಗ್ತಿದ್ದ ಮಂಗಳಮುಖಿಯರು ಹಣ ಕೊಟ್ರೂನೂ ಅವ್ರ ಬಳಿ ಇದ್ದ ಪರ್ಸ್, ಮೊಬೈಲ್, ಲ್ಯಾಪ್ ಟಾಪ್ ಚಿನ್ನಾಭರಣ ಏನೇ ಇದ್ರೂ ಕಿತ್ತಕೊಂಡು ಎಸ್ಕೇಪ್ ಆಗ್ತಿದ್ರು ಅನ್ನೋದು ತನಿಖೆ ವೇಳೆ ಗೊತ್ತಾಗಿದೆ. ನಗರದ ಹಲವೆಡೆ ಕೃತ್ಯ ಎಸಗಿದ್ರೂ ಆರೋಪಿಗಳು ಸಿಕ್ಕಿ ಬಿದ್ದಿರಲಿಲ್ಲ.. ಇತ್ತೀಚೆಗೆ ಕೊಡಿಗೇಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಬೆಳ್ ಬೆಳಗ್ಗೆ ಸುಲಿಗೆ ಮಾಡೋವಾಗ ಪೊಲೀಸರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.‌

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ಟೊಮ್ಯಾಟೊ ಸಾಗಿಸುತ್ತಿದ್ದ ವಾಹನ ಕಿಡ್ನ್ಯಾಪ್