Select Your Language

Notifications

webdunia
webdunia
webdunia
webdunia

ಸದನದಲ್ಲಿ ಸದ್ದು ಮಾಡಿದ ಜೈನ ಮುನಿಗಳ ಹತ್ಯೆ..!

ಸದನದಲ್ಲಿ ಸದ್ದು ಮಾಡಿದ ಜೈನ ಮುನಿಗಳ ಹತ್ಯೆ..!
bangalore , ಮಂಗಳವಾರ, 11 ಜುಲೈ 2023 (18:15 IST)
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣದ ಇಂದು ವಿಧಾನಸಭೆ ಕಲಾಪದಲ್ಲಿ ಚರ್ಚೆ ಆಯಿತು.ಈ ಪ್ರಕರಣ ಅತ್ಯಂತ ಹೀನಾಯವಾಗಿದ್ದು.ಇದನ್ನ ಯಾರು ಕೂಡ ಸಮರ್ಥ ನೆ ಮಾಡಿಕೊಳ್ಳಲಾಗದು ಈ ಹತ್ಯೆಯನ್ನ ತೀವ್ರವಾಗಿ ಖಂಡಿಸಬೇಕು ಇದರ ಸತ್ಯಾತ್ಯತೆ ಬಗ್ಗೆ ಚರ್ಚೆ ಆಗಬೇಕು ಎಂದು ಬಿಜೆಪಿ ನಾಯಕರು ಆಗ್ರಹಿಸಿದರು.ಜೈನ ಮುನಿಗಳ ಹತ್ಯೆವಿಚಾರವಾಗಿ ಸದನದಲ್ಲಿ ಪ್ರಸ್ತಾಪಿಸಿದ ಶಾಸಕ ಅಭಯ್ ಪಾಟೀಲ್ ಜೈನ ಮುನಿ ನಾಪತ್ತೆಯಾದ ವಿಚಾರವಾಗಿ ದೂರು ನೀಡಿದ್ದರು. ಆದರೆ ಪೊಲೀಸ್ ಅಧಿಕಾರಿಗಳು ಸರಿಯಾಗಿ ಸ್ಪಂದಿಸಿಲ್ಲ ಎಂದು ಟ್ರಸ್ಟ್ ಸದಸ್ಯರು ಆರೋಪ ಮಾಡಿದ್ದರು. ಹತ್ಯೆ ಆರೋಪಿ ಒರ್ವನ ಹೆಸರು ಮಾತ್ರ ಬಹಿರಂಗವಾಗಿ ಹೇಳಿದ್ದಾರೆ ಪೊಲೀಸರು.ಆದರೆ ಮತ್ತೋರ್ವನ ಹೆಸರನ್ನು ಬಹಿರಂಗವಾಗಿ ಹೇಳಿಲ್ಲ. ಇದು ಸಂಶಯಕ್ಕೆ ಕಾರಣವಾಗಿದೆ.ಎರಡನೇ ಆರೋಪಿ ಹಸನ್ ಹೆಸರು ಏಕೆ ಹೇಳುತ್ತಿಲ್ಲ.ಪೊಲೀಸರು ಟ್ರಸ್ಟೀಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂಬ ಆರೋಪ ಇದೆ.ದಿಗಂಬರ ಸಮಾಜದ ಮುನಿಗಳು ಆರ್ಥಿಕ ವ್ಯವಹಾರ ಮಾಡಲು ಸಾಧ್ಯವಿಲ್ಲ.ಆದರೆ ಸ್ವಾಮೀಜಿಗಳು ಎಲ್ಲಾ ತ್ಯಾಗ ಮಾಡಿ ಸನ್ಯಾಸಿ ಆಗಿದ್ದಾರೆ.ಯಾರ ಒತ್ತಡದಿಂದ ಪೊಲೀಸರು ಮುನಿಗಳು ಆರ್ಥಿಕ ವ್ಯವಹಾರದಲ್ಲಿ ತೊಡಗಿಕೊಂಡಿದ್ದಾರೆ ಎಂದು ಹೇಳಬೇಕು.ಇದನ್ನು ಸಿಬಿಐಗೆ ನೀಡಬೇಕು ಎಂದು ಅಭಯ ಪಾಟೀಲ್ ಆಗ್ರಹಿಸಿದರು.ಈ ವೇಳೆ ಶಾಸಕ ಲಕ್ಷ್ಮಣ ಸೌವದಿ ಮಾತನಾಡಿ ಈ ಕೃತ್ಯ ಎಸಗಿದವರನ್ನ ಕಠಿಣ ಕ್ರಮ ಕೈಗೊಳ್ಳಬೇಕು.ನಿಷ್ಪಕ್ಷಪಾತವಾಗಿ ತನಿಖೆ ಆಗಬೇಕು - ಮರಣದಂಡನೆ ವಿಧಿಸುವ ರೀತಿ ಕ್ರಮ ಆಗಬೇಕು ಎಂದು ಸಿಎಂ ಬಳಿ ಮನವಿ ಮಾಡ್ತೀನಿ ಎಂದು ಒತ್ತಾಯಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಮಡಿವಾಳ ಮಾರುಕಟ್ಟೆಗೆ ದಕ್ಷಿಣ ವಲಯ ಆಯುಕ್ತರಿಂದ ಭೇಟಿ ನೀಡಿ ಪರಿಶೀಲನೆ