Select Your Language

Notifications

webdunia
webdunia
webdunia
webdunia

ಬೆಂಗಳೂರಿನಲ್ಲಿ ಬೆಳ್ಳಂ ಬೆಳಗ್ಗೆ ಗುಂಡಿನ ಸದ್ದು

The sound of gunshots in the morning of Bellam in Bangalore
bangalore , ಮಂಗಳವಾರ, 11 ಜುಲೈ 2023 (17:06 IST)
ಬೆಳ್ಳಂ ಬೆಳಗ್ಗೆ ನಗರದಲ್ಲಿ ಗುಂಡಿನ ಸದ್ದು ಕೇಳಿದೆ.ಖತರ್ನಾಕ್ ರಾಬರ್ ಯಾಸರ್(26) ಎಂಬಾತನ ಕಾಲಿಗೆ ಗುಂಡು ಹಾರಿಸಲಾಗಿದೆ.ಸದಾಶಿವನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪ್ಯಾಲೇಸ್ ಬಳಿ ಘಟನೆ ನಡೆದಿದೆ.ಶೇಷಾದ್ರಿಪುರಂ ಪೊಲೀಸ್ರಿಗೆ ಬೇಕಿದ್ದ ಖತರ್ನಾಕ್ ಆಸಾಮಿ ಯಾಸರ್ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿ ರಾಬರಿ ಮಾಡ್ತಿದ್ದ.ಸುಮಾರು ಏಳಕ್ಕೂ ಹೆಚ್ಚು ಪ್ರಕರಣಗಳಲ್ಲಿ  ಕುಖ್ಯಾತ ಆರೋಪಿ ಯಾಸರ್ ಬೇಕಾಗಿದ್ದ.ಸುಳ್ತಾನ್ ಪಾಳ್ಯದ ಭುವನೇಶ್ವರ್ ನಗರದ ನಿವಾಸಿ ಆರೋಪಿಯಾಗಿದ.ಅಪ್ರಾಪ್ತನಾಗಿದ್ದನಿಂದಲೇ ಸುಲಿಗೆ ರಾಬರಿಯಲ್ಲಿ ಆರೋಪಿ ನಿಪುಣನಾಗಿದ್ದ .ಇಂದು ಬೆಳಗ್ಗೆ ಆರೋಪಿಯನ್ನ ಹಿಡಿಯಲು ಹೋದಾಗ ಪೊಲೀಸ್ರಿಂದ ತಪ್ಪಿಸಿಕೊಂಡಯ ಎಸ್ಕೇಪ್ ಯತ್ನ ಮಾಡಿದ್ದಾನೆ.ಪ್ಯಾಲೇಸ್ ರೋಡ್ ಬಳಿ ಪರಾರಿಗೆ ಯತ್ನಿಸಿದ್ದು,ಹಿಡಿಯಲು ಹೋದ ಪೊಲೀಸರ ಮೇಲೆ ಮರಕಾಸ್ತ್ರ ಹಿಡಿದು ಅಟ್ಯಾಕ್ ಮಾಡಿದ್ದಾನೆ.ಈ ವೇಳೆ ಆತ್ಮರಕ್ಷಣೆಗೆ ಬಲಗಾಲಿಗೆ ಗುಂಡು ಹಾರಿಸಿ ಶೇಷಾದ್ರಿಪುರಂ ಇನ್ಸ್ ಪೆಕ್ಟರ್ ಬಂಧಿಸಿದ್ದಾರೆ.ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕರಾವಳಿಯಲ್ಲಿ ತಗ್ಗಿದ ಮಳೆ ಅಬ್ಬರ