Select Your Language

Notifications

webdunia
webdunia
webdunia
webdunia

ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಸಮೀಕ್ಷೆ

ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಸಮೀಕ್ಷೆ
bangalore , ಮಂಗಳವಾರ, 11 ಜುಲೈ 2023 (15:49 IST)
ಬಿಬಿಎಂಪಿ ವ್ಯಾಪ್ತಿಯಲ್ಲಿ ಜುಲೈ 11ರಿಂದ  ನಾಯಿಗಳ ಸಮೀಕ್ಷೆಯ ಕಾರ್ಯ ನಡೆಸಲಾಗುತ್ತೆ.ಪಾಲಿಕೆಯ ಪಶುಪಾಲನಾ ವಿಭಾಗದಿಂದ ಬೀದಿ ನಾಯಿಗಳ ಸಂಖ್ಯೆ ನಿಯಂತ್ರಣ ಮಾಡಲಾಗುತ್ತೆ. ರೇಬೀಸ್ ರೋಗ ತಡೆಗಟ್ಟಲು ಬೀದಿ ನಾಯಿಗಳಲ್ಲಿ ಸಂತಾನಹರಣ ಶಸ್ತ್ರ ಚಿಕಿತ್ಸೆ ಮತ್ತು ಆಂಟಿರೇಬೀಸ್ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತೆ.2019ನೇ ಸಾಲಿನಲ್ಲಿ 3.10 ಲಕ್ಷ ಬೀದಿ ನಾಯಿಗಳು ಇರುವುದಾಗಿ ಅಂದಾಜು ಮಾಡಲಾಗಿದೆ.
 
840 ಚ.ಕಿ.ಮೀ ವ್ಯಾಪ್ತಿಯುಳ್ಳ ಬಿಬಿಎಂಪಿಯನ್ನು 0.5 ಚ.ಕಿ.ಮೀ ವ್ಯಾಪ್ತಿಯ, 6,850 ಮೈಕ್ರೋ ಜೋನ್ ಗಳನ್ನಾಗಿ ವಿಂಗಡನೆ ಮಾಡಲಾಗಿದ್ದು,1,360 ಮೈಕ್ರೋ ಜೋನ್ ಗಳಲ್ಲಿ ಸಮೀಕ್ಷೆ ಮಾಡಲು ಬಿಬಿಎಂಪಿ ಆಯ್ಕೆ  ಮಾಡಿದೆ.ಬೆಂಗಳೂರು ಪಶುಪಾಲನಾ ಹಾಗೂ ಪಶುವೈದ್ಯ ಸೇವಾ ಇಲಾಖೆಯ 70 ಅರೆತಾಂತ್ರಿಕ ಸಿಬ್ಬಂದಿ, ಪಾಲಿಕೆಯ ಪಶುಪಾಲನಾ ವಿಭಾಗದ 30 ಸಿಬ್ಬಂದಿ ಮೂಲಕ ಸಮೀಕ್ಷೆ ನಡೆಸಲಾಗಿದೆ.ಒಟ್ಟು 14 ದಿನಗಳಲ್ಲಿ ಬೀದಿ ನಾಯಿಗಳ ಸಮೀಕ್ಷೆ ನಡೆಸಲಾಗುತ್ತೆ.ಮೈಕ್ರೋಜೋನ್‌ನಲ್ಲಿ ಕಂಡು ಬರುವ ಬೀದಿ ನಾಯಿಗಳ ಫೊಟೋದೊಂದಿಗೆ  WVS ಡೇಟಾ ಕಲೆಕ್ಷನ್ ಆ್ಯಪ್‌ನಲ್ಲಿ ಪ್ರತಿ ನಾಯಿಯ ಮಾಹಿತಿ ಲಭ್ಯವಾಗಲಿದೆ.ಆ್ಯಪ್‌ನಲ್ಲಿ ದಾಖಲಾದ ಮಾಹಿತಿ ಅಧಿಕಾರಿಗಳು ಮತ್ತು ಸಿಬ್ಬಂದಿ ಮಾತ್ರ ವೀಕ್ಷಣೆ ಮಾಡದಿದ್ದಾರೆ.
 
ಒಟ್ಟು 14ದಿನಗಳ ಸಮೀಕ್ಷೆಯ ನಂತರ ಡಾ.ಕೆ.ಪಿ.ಸುರೇಶ್, ಪ್ರಧಾನ ವಿಜ್ಞಾನಿಗಳು ಮಾಹಿತಿ ಕ್ರೋಢೀಕರಿಸಿ ಪಾಲಿಕೆಗೆ ವರದಿ ನೀಡಲಿದ್ದಾರೆ.ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಒಟ್ಟು ಬೀದಿನಾಯಿಗಳ ಸಂಖ್ಯೆ ಲಭ್ಯವಾಗಿದ್ದು,ಸಂತಾನಹರಣ ಶಸ್ತ್ರ ಚಿಕಿತ್ಸೆಗೆ ಒಳಪಟ್ಟಿರುವ ಶೇಕಡವಾರು ಬೀದಿನಾಯಿಗಳ ಸಂಖ್ಯೆ ಲಭ್ಯವಾಗಿದೆ.ಮಾನವ-ಬೀದಿನಾಯಿಗಳ ಅನುಪಾತ ಲಭ್ಯವಾಗಿದೆ.ವಾರ್ಡ್-ವಲಯವಾರು ಬೀದಿನಾಯಿಗಳ ಸಂಖ್ಯೆ ಲಭ್ಯವಾಗಿದೆ ಹೀಗೆ ಬಿಬಿಎಂಪಿ ವ್ಯಾಪ್ತಿಯ ನಾಯಿಗಳ ಸಮೀಕ್ಷೆ ನಡೆಸ್ತಿದೆ

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಾಯೋಗಿಕ ಪರೀಕ್ಷೆ ಇಲ್ಲದ ವಿಷಯಗಳಿಗೆ 20 ಆಂತರಿಕ ಅಂಕ ಜಾರಿ