Select Your Language

Notifications

webdunia
webdunia
webdunia
webdunia

ಪ್ರೀತಿ ಸೇಡು ಸ್ನೇಹಿತನನ್ನೇ ಇರಿದು ಕೊಂದ ಹಂತಕರು

Assassins who stabbed a friend to death for love revenge
bangalore , ಮಂಗಳವಾರ, 11 ಜುಲೈ 2023 (19:37 IST)
ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಕಿಡ್ನ್ಯಾಪ್ ಕೇಸ್ ಒಂದು ದಾಖಲಾಗಿತ್ತು. ತಾಹಿರ್ ಎಂಬಾತನನ್ನ ಆಟೋದಲ್ಲಿ ಬಂದವರು ಅಪಹರಿಸಿ ಹೋಗಿದ್ರು. ತಕ್ಷಣ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿ ನಂತರ ದೂರು ಕೂಡ ದಾಖಲಿಸಿಕೊಂಡಿದ್ರು. ಆದ್ರೆ ಅದ್ಯಾವುದೂ ಪ್ರಯೋಜನಕ್ಕೆ ಬರಲಿಲ್ಲ. ಹಂತಕರು ತಾಹೀರ್ ನನ್ನ ಅದಾಗಲೆ ಮೂಟೆ ಕಟ್ಟಿದ್ರು.ತಾಹೀರ್ ,ಹಿಂದೂಸ್ಥಾನ್ ಕಂಪನಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದ. ಬದುಕು ನೆಟ್ಟಗೆ ನಡೀತಿತ್ತು. ಒಂದಷ್ಟು ಸ್ನೇಹಿತರ ಪಟಾಲಂ ಕೂಡ ಇತ್ತು. ಹೀಗೆ ಇದ್ದುಬಿಟ್ಟಿದ್ದರೆ ಬಹುಶಃ ಈ ರೀತಿ ಭೀಕರವಾಗಿ ಸಾವನ್ನಪ್ಪುತ್ತಿರಲಿಲ್ವೇನೋ.. ಆದ್ರೆ  17-18 ವಯಸ್ಸಿನಲ್ಲಿಯೇ ಪ್ರೀತಿಗೆ ಬಿದ್ದಿದ್ದ. ಇತ್ತ ಆಪ್ತ  ಸ್ನೇಹಿತನಾಗಿದ್ದ ನ್ಯಾಮತ್ ಕೂಡ ಅದೇ ಹುಡುಗೀನ ಪ್ರೀತಿಸುತ್ತಿದ್ದ. ಇದು ಇಬ್ಬರ ನಡುವ ಬಿರುಕು ಬಿಡಲು ಶುರುವಾಗಿತ್ತು. ಅದೇ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು.

ಇಬ್ಬರು ಬಡಿದಾಡಿಕೊಂಡ ಹಿನ್ನಲೆ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಒಂದು ವರ್ಷದ ಹಿಂದೆ ದೂರು ಕೂಡ ದಾಖಲಾಗಿತ್ತು. ಈ ಹಿಂದೆ ಚಾಮರಾಜಪೇಟೆಗೆ ಹೊಂದಿಕೊಂಡಂತಿರುವ ಟಿಪ್ಪು ನಗರದಲ್ಲಿ ವಾಸ ಮಾಡ್ತಿದ್ದ ತಾಹೀರ್ ಕುಟುಂಬ, ಕಿರಿಕ್ ನಡೆದ ಬಳಿಕ ಚಂದ್ರಲೇಔಟ್ ಗೆ ಶಿಫ್ಟ್ ಆಗಿದ್ದರು. ಇನ್ನು ಈ ಜಗಳ ಅಷ್ಟಕ್ಕೆ ನಿಲ್ಲಲಿಲ್ಲ. ಇಬ್ಬರೂ ತನ್ನ ಸ್ನೇಹಿತರ ಜೊತೆ ನ್ಯಾಮತ್ ನ ಕೊಲ್ಲೋದಾಗಿ ತಾಹೀರ್ , ತಾಹಿರ್ ನ ಕೊಲ್ಲೋದಾಗಿ ನ್ಯಾಮತ್ ಹೇಳಿಕೊಂಡು ತಿರುಗಾಡುತ್ತಿದ್ದರು.  ಈ ವಿಚಾರ ಕಿವಿಗೆ ಬಿದ್ದ ಹಿನ್ನಲೆ ನ್ಯಾಮತ್ ತನ್ನ ಸ್ನೇಹಿತರನ್ನ ಸೇರಿಸಿಕೊಂಡು ಜುಲೈ 10 ರ ರಾತ್ರಿ 11 ಗಂಟೆಗೆ ಫೋನ್ ಮಾಡಿ ಮನೆಯಿಂದ ಹೊರಗೆ ಕರೆಸಿಕೊಂಡಿದ್ದ. ನಾಯಂಡಹಳ್ಳಿ  ಮೆಟ್ರೊ ಸ್ಟೇಷನ್ ಬಳಿಯಿಂದ ತಾಹೀರ್ ನನ್ನ ಇದೇ ಆಟೋದಲ್ಲಿ ಕಿಡ್ನ್ಯಾಪ್ ಮಾಡಿದ್ರು. ವಿಚಾರ ತಿಳಿದ ತಾಹೀರ್ ತಂದೆ ಸೈಯದ್ ಮಹಬೂಬ್ ಮಗನಿಗೆ ಕರೆ ಮಾಡಿದ್ದರು. ಆತ ರಿಸೀವ್ ಮಾಡಿರಲಿಲ್ಲ. ನಂತರ ನೇರವಾಗಿ ಹಂತಕ ನ್ಯಾಮತ್ ತಂದೆ ಬಳಿ ಬಂದು ಹೇಳಿಕೊಂಡಾಗ ನ್ಯಾಮತ್ ತಂದೆ ಕೂಡ ತಮ್ಮ ಮಗನಿಗೆ ಕರೆ ಮಾಡಿ  ತಾಹೀರ್ ನನ್ನ ಕರೆತರಲು ಹೇಳಿದ್ದರು.ಆದ್ರೆ ಅದು ಕೂಡ ಸಫಲವಾಗಿರಲಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ಟೊಮ್ಯಾಟೊ ಸಾಗಿಸುತ್ತಿದ್ದ ವಾಹನ ಕಿಡ್ನ್ಯಾಪ್