Publish Date: Sun, 02 Jul 2023 (21:14 IST)
Updated Date: Sun, 02 Jul 2023 (20:20 IST)
ನಾಳೆಯಿಂದ ವಿಧಾನ ಮಂಡಲ ಜಂಟಿ ಅಧಿವೇಶನ ಹಿನ್ನಲೆ ಪೂರ್ವ ಸಿದ್ದತೆ ಬಗ್ಗೆ ಸ್ಪೀಕರ್ ಯು.ಟಿ ಖಾದರ್ ಪ್ರತಿಕ್ರಿಯಿಸಿದ್ದು,ನಾಳೆಯಿಂದ 14 ರ ವರೆಗೂ ನಮ್ಮ ಅಧಿವೇಶನ ಇರುತ್ತೆ.ರಾಜ್ಯಪಾಲರು 12 ಗಂಟೆ ಭಾಷಣ ಮಾಡುತ್ತಾರೆ.ಬಳಿಕ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಗುತ್ತೆ.ಬಿಲ್ ಗಳು ಮಂಡಿಸುವುದು ಆಡಳಿತ ಪಕ್ಷ ಯಾವೆಲ್ಲ ಬಿಲ್ ಮಂಡಿಸುತ್ತಾರೆ ಅಂತ ನೋಡಬೇಕು ಎಂದು ಯು ಟಿ ಖಾದರ್ ಹೇಳಿದ್ರು.ಬಿಜೆಪಿ ಪ್ರತಿಭಟನೆ ವಿಚಾರವಾಗಿ ಯುಟಿ ಖಾದರ್ ಪ್ರತಿಕ್ರಿಯಿಸಿದ್ದು, ಜನರಿಗೆ ಪ್ರಯೋಜನ ಆಗುವಂತಹದ್ದು ನಡೆಯಲಿ,ಮೊದಲ ಅಧಿವೇಶನ, ಬಹಳ ಆಸಕ್ತಿಯಿಂದ ಇದ್ದೇನೆ.ಪ್ರೀತಿ, ಸೌಹಾರ್ದಯತೆಯಿಂದ ಅಧಿವೇಶನ ನಡೆಸಬೇಕು ಎಂದುಕೊಂಡಿದ್ದೇನೆ.ಹೊಸ ಶಾಸಕರು ಇದಾರೆ, ಹೆಚ್ಚಿನ ಶಾಸಕರು ಅಧಿವೇಶನದಲ್ಲಿ ಭಾಗಿಯಾಗಲಿದ್ದಾರೆ ಎಂದು ಸಚಿವ ಯು ಟಿ ಖಾದರ್ ಹೇಳಿದ್ದಾರೆ.