Select Your Language

Notifications

webdunia
webdunia
webdunia
webdunia

ದ್ವೇಷದ ಭಾಷಣ ಮಾಡೋರನ್ನು ಗಡಿಪಾರು ಮಾಡಿ : ಖಾದರ್

ಖಾದರ್
ಮಂಗಳೂರು : ಕೊಲೆಗೆ ನಾವೇ ಪ್ರೇರಣೆ ಎಂದು ಹೇಳಿದವರು ಸಮಾಜಕ್ಕೆ ಅಪಾಯಕಾರಿ. ಇವರೇ ನಮ್ಮ ನಡುವಿನ ನಿಜವಾದ ದೇಶದ್ರೋಹಿಗಳು. ಇಂತವರು ಸಮಾಜಕ್ಕೆ ಭಾರ. ಹೀಗಾಗಿ ಇವರನ್ನು ಗಡಿಪಾರು ಮಾಡಬೇಕೆಂದು ವಿಪಕ್ಷ ಉಪನಾಯಕ ಯು.ಟಿ.ಖಾದರ್ ಆಕ್ರೋಶ ವ್ಯಕ್ತಪಡಿಸಿದರು.

ಮಂಗಳೂರಿನಲ್ಲಿ ಮಾತನಾಡಿದ ಅವರು, ವಿಎಚ್ ಪಿ ಮುಖಂಡ ಶರಣ್ ಪಂಪ್ ವೆಲ್ ದ್ವೇಷದ ಹೇಳಿಕೆ ನೀಡಿದ್ದಾರೆ. ಉಳ್ಳಾಲದಲ್ಲಿ ಜನ ಸೌಹಾರ್ದತೆಯಿಂದ ಇದ್ದಾರೆ. ಕೋಮುವಾದಿ ಶಕ್ತಿಗಳಿಗೆ ಜನ ಅವಕಾಶ ಕೊಡಲ್ಲ. ಹಿಂದೂ ಆಗಲೀ, ಮುಸ್ಲಿಂ ಆಗಲೀ ಯಾಕೆ ಕೊಲೆಯಾಗಬೇಕು ಕೊಲೆಯಾಗಬೇಕೆಂದು ಬಿಜೆಪಿ ಯವರು ಕಾಯುತ್ತಿರುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ. 

ಅಲ್ಲದೆ ಪ್ರಾಣ ಕಳಕೊಂಡವರ ಕುಟುಂಬದ ಅಕ್ಕ-ತಂಗಿಯರ ನೋವು ಇವರಿಗೆ ಅರ್ಥ ಆಗುತ್ತದೆಯೇ?. ಚುನಾವಣೆಗೋಸ್ಕರ, ಮಾಧ್ಯಮದಲ್ಲಿ ಬಿಲ್ಡಪ್ ಸಿಗತ್ತೆ ಅಂತ ಹೇಳಿಕೆ ಕೊಡುತ್ತಾರೆ. ಇವರ ಹೇಳಿಕೆಯಿಂದ ಜನರಲ್ಲಿ ಭಯ ಶುರುವಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಅಧಿಕಾರಕ್ಕೆ ಬಂದ್ರೆ ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ: ಕುಮಾರಸ್ವಾಮಿ