Publish Date: Fri, 17 Aug 2018 (15:36 IST)
Updated Date: Fri, 17 Aug 2018 (15:39 IST)
ಅಗಲಿದ ಜನನಾಯಕ, ಅಜಾತಶತ್ರು, ಬಿಜೆಪಿ ಪಕ್ಷದ ಮುಖಂಡ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ನಿಧನದ ಹಿನ್ನಲೆಯಲ್ಲಿ ಗುಮ್ಮಟ ನಗರಿಯಲ್ಲಿ ಶೋಕಾಚರಣೆ ಕಾರ್ಯಕ್ರಮಗಳು ನಡೆದಿವೆ.
ವಿಜಯಪುರ ಜಿಲ್ಲೆಯಾದ್ಯಂತ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮಗಳು ಹಾಗೂ ಶೋಕಾಚರಣೆ ನಡೆದಿವೆ. ಭಾರತೀಯ ಜನತಾ ಪಕ್ಷದ ವಿಜಯಪುರ ನಗರದ ಜಿಲ್ಲಾ ಘಟಕದ ಕಚೇರಿಯಲ್ಲಿ ಅಗಲಿದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.
ಅಟಲ್ ಬಿಹಾರಿ ವಾಜಪೇಯಿಯವರ ಭಾವಚಿತ್ರಕ್ಕೆ ಪುಷ್ಪಮಾಲೆ, ಪುಷ್ಪಾರ್ಚನೆ ಸಲ್ಲಿಕೆ ಮಾಡಲಾಯಿತು. ಶ್ರದ್ಧಾಂಜಲಿ ಸಲ್ಲಿಸಿ ನುಡಿನಮನದ ಮೂಲಕ ಅಗಲಿದ ನಾಯಕನನ್ನು ಬಿಜೆಪಿ ಮುಖಂಡರು ಸ್ಮರಿಸಿದರು.
ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಎಂಎಲ್ಸಿ ಅರುಣ ಶಹಾಪೂರ, ವಿಜಯಕುಮಾರ ಪಾಟೀಲ್, ಸಂಗರಾಜ ದೇಸಾಯಿ ಸೇರಿದಂತೆ ಜಿಲ್ಲಾ ಬಿಜೆಪಿ ಮುಖಂಡರು, ಪಕ್ಷದ ಜಿಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.