Publish Date: Fri, 17 Aug 2018 (15:11 IST)
Updated Date: Fri, 17 Aug 2018 (15:14 IST)
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಗಲಿದ ನಂತರ ದೇಶದೆಲ್ಲೆಡೆ ಸಂತಾಪ ವ್ಯಕ್ತವಾಗುತ್ತಿದೆ. ಗಡಿ ಜಿಲ್ಲೆಯಾಗಿರುವ ಬೀದರ್ ನಲ್ಲೂ ಕೂಡ ಜಿಲ್ಲೆಯ ಬಿಜೆಪಿ ಪಕ್ಷದ ಕಚೇರಿ ಮೇಲೆ ಪಕ್ಷದ ಭಾವುಟ ಅರ್ಧಕ್ಕೆ ಹಾರಿಸಿ ಸಂತಾಪ ಸೂಚಿಸಲಾಯಿತು.
ಈ ವೇಳೆ ಪಕ್ಷದ ಕಚೇರಿಯಲ್ಲಿ ಜಿಲ್ಲೆಯ ಬಿಜೆಪಿ ಮುಖಂಡರಾದ ಸಂಸದ ಭಗವಂತ ಖೂಬಾ, ಎಮ್ ಎಲ್ ಸಿ ರಘುನಾಥ ಮಲ್ಕಾಪುರೆ, ಬಿಜೆಪಿ ಜಿಲ್ಲಾಧ್ಯಕ್ಷ ಶೈಲೆಂದ್ರ ಬೆಲ್ದಾಳೆ, ಬಾಬುವಾಲಿ ಇತರೆ ಬಿಜೆಪಿ ಕಾರ್ಯಕರ್ತರು ಅಟಲ್ ಜೀ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಅಗಲಿದ ಹಿರಿಯ ನಾಯಕನ ಗುಣಗಾನ ಮಾಡಿ, ಅವರ ಸೇವೆ ಸ್ಮರಿಸಿದರು. ಮಾಜಿ ಪ್ರಧಾನಿ ಹಾಗೂ ಭಾರತ ರತ್ನ ವಾಜಪೇಯಿ ಅವರ ಅಗಲಿಕೆಗೆ ಸಂತಾಪ ಸೂಚಿಸಿದರು.